ಕರ್ನಾಟಕ

karnataka

ETV Bharat / state

ತುಮಕೂರು: ಗೆಳೆಯನ ಕೊಂದು ಅಪಘಾತವೆಂದು ಬಿಂಬಿಸಿದ ಆರೋಪಿಗಳ ಬಂಧನ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಹತ್ಯೆಗೈದು ಅಪಘಾತವೆಂದು ಸುಳ್ಳು ಹೇಳಿದ ಮೂವರನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.

murder-of-friend-three-accused-arrested
ಗೆಳೆಯನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಲು ಹೋದ ಆರೋಪಿಗಳ ಬಂಧನ

By

Published : Jun 27, 2022, 3:35 PM IST

ತುಮಕೂರು: ಸ್ನೇಹಿತನಿಗೆ ಮದ್ಯಪಾನ ಮಾಡಿಸಿ ಕೊಲೆಗೈದು ಅಪಘಾತವೆಂದು ಹೇಳಿದ ಆರೋಪಿಗಳಾದ ಛಲಪತಿ, ನಾಗೇಶ್, ಶಿವಕುಮಾರ್ ಎಂಬ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸುದೀಪ್ ಎಂಬಾತನ ಕೊಲೆಯಾಗಿತ್ತು.

ಪ್ರಕರಣದ ವಿವರ: ಈ ಹಿಂದೆ ಸುದೀಪ್, ನಾಗೇಶ್, ಶಿವಕುಮಾರ್ ಮತ್ತು ಛಲಪತಿ ಮೊಲದ ಬೇಟೆಗೆ ಹೋಗಿದ್ದರು. ಬೇಟೆಯ ಸಂದರ್ಭದಲ್ಲಿ ಛಲಪತಿ ಮತ್ತು ಸುದೀಪ್ ಗಲಾಟೆ ಮಾಡಿಕೊಂಡಿದ್ದಾರೆ. ಸಿಟ್ಟಿಗೆದ್ದ ಸುದೀಪ್ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡಿದ್ದ ಛಲಪತಿ, ಸುದೀಪ್‌ನ ಹತ್ಯೆಗೆ ಸಂಚು ರೂಪಿಸಿದ್ದ.

ಮೇ 25ರಂದು ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಯಾಕ್ರನಹಳ್ಳಿ ಬಳಿ ಈ ನಾಲ್ವರು ಮೊಲದ ಬೇಟೆಗೆ ಬಂದಿದ್ದರು. ಶಿವಕುಮಾರ್ ಮತ್ತು ನಾಗೇಶ್ ನಾಡಬಂದೂಕು ಹಿಡಿದು ಬೇಟೆಯಾಡಲು ಹೋಗಿದ್ದಾರೆ. ಸುದೀಪ್ ಮತ್ತು ಛಲಪತಿ ಇಬ್ಬರು ಮದ್ಯಪಾನ ಮಾಡಿ ಹಿಂದಿನ ಗಲಾಟೆ ವಿಷಯ ನೆನಪಿಸಿ ಪರಸ್ಪರ ಹೊಡೆದಾಡಿದ್ದಾರೆ. ಈ ವೇಳೆ ಛಲಪತಿ, ಸುದೀಪ್ ತಲೆಗೆ ನಾಡಬಂದೂಕಿನಿಂದ ಹೊಡೆದು ಕೊಂದು ಹಾಕಿದ್ದಾನೆ. ಬಳಿಕ ಅಪಘಾತವೆಂದು ಬಿಂಬಿಸಲು ಶವವನ್ನು ರಸ್ತೆ ಬಳಿ ಬಿಸಾಡಿ ತಲೆಮರೆಸಿಕೊಂಡಿದ್ದರು. ರಸ್ತೆಯಲ್ಲಿ ಮೃತದೇಹ ಕಂಡ ಸ್ಥಳೀಯರೊಬ್ಬರು ಕೊಡಿಗೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಕೋಲಾರ: ಗ್ರಾಮ ಪಂಚಾಯತ್​ ಅಧ್ಯಕ್ಷರ ಚುನಾವಣೆಯಲ್ಲಿ ವಿಕೋಪಕ್ಕೆ ತಿರುಗಿದ ಗಲಾಟೆ

ABOUT THE AUTHOR

...view details