ತುಮಕೂರು: ಡಿಎಸ್ಎಸ್ ಮುಖಂಡ ನರಸಿಂಹಮೂರ್ತಿ (45) ಎಂಬವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಗುಬ್ಬಿ ಪಟ್ಟಣದ ಬಿ.ಎಸ್.ರಸ್ತೆಯಲ್ಲಿ ಘಟನೆ ನಡೆದಿದೆ.
ಗುಬ್ಬಿಯಲ್ಲಿ ಹಾಡಹಗಲೇ ಡಿಎಸ್ಎಸ್ ಮುಖಂಡನ ಕೊಚ್ಚಿ ಕೊಲೆ - the DSS leader killed by the strangers at gubbi
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಡಿಎಸ್‌ಎಸ್ ಮುಖಂಡನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಗುಬ್ಬಿ ಪಟ್ಟಣದಲ್ಲಿ ಹಾಡುಹಗಲೇ ಡಿಎಸ್ಎಸ್ ಮುಖಂಡನ ಬರ್ಬರ ಕೊಲೆ
ಡಿಎಸ್ಎಸ್ ತಾಲ್ಲೂಕು ಸಂಚಾಲಕನಾಗಿದ್ದ ನರಸಿಂಹ ಮೂರ್ತಿ, ಮಧ್ಯಾಹ್ನ ಟೀ ಅಂಗಡಿ ಮುಂದೆ ಕುಳಿತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪತ್ನಿ ರೊಟ್ಟಿ ಮಾಡಿಕೊಡದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ
Last Updated : Jun 15, 2022, 5:47 PM IST