ತುಮಕೂರು:ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು: ಮಹಿಳೆಯ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯ ಬಂಧನ - ತುಮಕೂರು ಅಪರಾಧ ಸುದ್ದಿ
ಜಾನುವಾರು ಹೊಡೆದುಕೊಂಡು ಹೋಗುತ್ತಿದ್ದ ಲಲಿತಮ್ಮ ಎಂಬುವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿ ಶಿವಕುಮಾರ್ನನ್ನು ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ ಬಂಧಿತ ಆರೋಪಿ
ಶಿವಕುಮಾರ ಬಂಧಿತ ಆರೋಪಿ. ಮಾ. 12ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಕೊರಟಗೆರೆ ತಾಲೂಕಿನ ಮಲ್ಲೇಕಾವು ಗ್ರಾಮದ ಕೆರೆಯಲ್ಲಿ ಜಾನುವಾರು ಹೊಡೆದುಕೊಂಡು ಹೋಗುತ್ತಿದ್ದ ಲಲಿತಮ್ಮ ಎಂಬುವರನ್ನು ಅಡ್ಡಗಟ್ಟಿ, ಸೀರೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ವೇಳೆ ಆರೋಪಿ ಮಹಿಳೆಯ ಮೈಮೇಲಿದ್ದ ಚಿನ್ನದ ತಾಳಿ ಮತ್ತು ಕಿವಿ ಓಲೆ ಕದ್ದಿದ್ದ ಎನ್ನಲಾಗಿದೆ.
ಇನ್ನು ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯಿಂದ ಮಹಿಳೆಯ ಚಿನ್ನದ ತಾಳಿ ಮತ್ತು ಕಿವಿ ಓಲೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.