ತುಮಕೂರು:ಕೊರೊನಾ ವೈರಸ್ ಸೋಂಕು ಕುರಿತು ಮಾಹಿತಿ ಪಡೆಯಲು ಆಗಮಿಸುವ ಆರೋಗ್ಯ ಸಿಬ್ಬಂದಿಗೆ ಸಹಕರಿಸಬೇಕೆಂದು ಚಿಕ್ಕನಾಯ್ಕನಹಳ್ಳಿ ಪುರಸಭೆ ಸದಸ್ಯರು ಮುಸ್ಲಿಂ ಸಮುದಾಯದವರಲ್ಲಿ ಮನವಿ ಮಾಡಿಕೊಂಡರು.
ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಪುರಸಭೆ ಸದಸ್ಯರ ಮನವಿ - tumkur news
ಕೊರೊನಾ ವೈರಸ್ ಸೋಂಕು ಕುರಿತು ಮಾಹಿತಿ ಪಡೆಯಲು ಬರುವ ಆರೋಗ್ಯ ಸಿಬ್ಬಂದಿಗೆ ಸಹಕರಿಸಬೇಕೆಂದು ಚಿಕ್ಕನಾಯ್ಕನಹಳ್ಳಿ ಪುರಸಭೆ ಸದಸ್ಯರು ಮುಸ್ಲಿಂ ಸಮುದಾಯದವರಲ್ಲಿ ಮನವಿ ಮಾಡಿಕೊಂಡರು.
ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಪುರಸಭೆ ಸದಸ್ಯರು
ಆಶಾ ಕಾರ್ಯಕರ್ತರು ಹಾಗೂ ವೈದ್ಯಕೀಯ ಇಲಾಖೆಯ ಸಿಬ್ಬಂದಿ ತಪಾಸಣೆಗೆಂದು ತಮ್ಮ ಮನೆ ಬಾಗಿಲಿಗೆ ಬಂದರೆ ದಯಮಾಡಿ ಸ್ಪಂದಿಸಿ. ಅವರು ಕೇಳುವ ಮಾಹಿತಿಯನ್ನ ಸಮಾಧಾನದಿಂದ ನೀಡಿ. ಕೊರೊನಾ ರೋಗವನ್ನು ಒಟ್ಟಾಗಿ ಎಲ್ಲರೂ ನಿರ್ಮೂಲನೆ ಮಾಡೋಣ ಎಂದರು.
ಈ ವೇಳೆ ಪುರಸಭಾ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ,ಶಾಮ್, ಮಂಜುನಾಥ್ ಗೌಡ ,ಆಟೊ ಚಾಲಕ ಸಂಘದ ಅಧ್ಯಕ್ಷ ಮಂಜುನಾಥ್ ಹಾಜರಿದ್ದರು.