ತುಮಕೂರು: 'ಈ ನನ್ನ ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ, ದಕ್ಷಿಣ ಕೊರಿಯಾದ ಕಿಂಗ್ ಪಿನ್ ಇದಾನಲ್ಲ..ಹಂಗೆ' ಎಂದು ಸಂಸದ ಬಸವರಾಜು ಅವರು ಸಚಿವ ಭೈರತಿ ಬಸವರಾಜ್ ಬಳಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾಧುಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದಿರುವ ಮಾಧ್ಯಮಗೋಷ್ಟಿಗೂ ಮುನ್ನ ಈ ರೀತಿ ಗುಸು-ಗುಸು ಮಾತನಾಡಿದ್ದಾರೆ. ಸುಮ್ಮನೀರು ಅಮೇಲೆ ಮಾತನಾಡೋಣ ಅಂತಾ ಸಚಿವ ಭೈರತಿ ಬಸವರಾಜ್ ಹೇಳಿದರೂ ಸಂಸದ ಬಸವರಾಜು ಮಾತು ಮುಂದುವರಿಸಿ ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನು ಎಂದಿದ್ದಾರೆ.
ಮಾಧ್ಯಮಗೋಷ್ಟಿಯಲ್ಲೇ ಸಂಸದ ಬಸವರಾಜು ಗುಸು-ಗುಸು ಒಂದು ಸೀಟ್ ಬರಲ್ಲ, ಮಾತು ಎತ್ತಿದ್ರೆ ಹೊಡಿ.. ಬಡಿ.. ಕಡಿ.. ಅಂತಾನೆ. ಹೆಂಡ್ತಿ ಸೀರೆ ಒಗೆಯೋಕೆ ಲಾಯಕ್ ನೀನು ಅಂತಾ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ಹೇಳ್ತಾನೆ ಎಂದು ಪರೋಕ್ಷವಾಗಿ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಹರಿಹಾಯ್ದಿದ್ದಾರೆ.
ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವನೇ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ. ಕರೆಯೋದು ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೆ ತಲೆಕೆಡಿಸಕೊಳ್ಳಬೇಡಿ ಎಂದು ಹೆಸರು ಹೇಳದೆ ಮಾಧುಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.