ಕರ್ನಾಟಕ

karnataka

ETV Bharat / state

ತುಮಕೂರು: ಬಾಣಂತಿ, ಅವಳಿ ಮಕ್ಕಳ ಸಾವು ಪ್ರಕರಣ : ಘಟನೆ ಬಗ್ಗೆ ಪತ್ರ ಬರೆದ ವೈದ್ಯೆ

ತುಮಕೂರಿನಲ್ಲಿ ನಡೆದ ಬಾಣಂತಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆ ಸೇರಿದಂತೆ ಮೂವರು ನರ್ಸ್​ಗಳನ್ನು ಅಮಾನತು ಮಾಡಲಾಗಿತ್ತು. ಇದೀಗ ಘಟನೆಗೆ ಸಂಬಂಧಿಸಿದಂತೆ ಅಂದಿನ ಪರಿಸ್ಥಿತಿಯನ್ನು ಅಮಾನತುಗೊಂಡ ವೈದ್ಯೆ ಉಷಾ, ರಾಜ್ಯ ವೈದ್ಯಕೀಯ ಸಂಘಕ್ಕೆ ಪತ್ರ ಬರೆದಿದ್ದಾರೆ.

Kn_tmk
ಬಾಣಂತಿ ಅವಳಿಮಕ್ಕಳ ಸಾವು ಪ್ರಕರಣ

By

Published : Nov 8, 2022, 3:42 PM IST

ತುಮಕೂರು:ಪ್ರಸವ ವೇಳೆ ಬಾಣಂತಿ, ಎರಡು ಶಿಶುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅಮಾನತು ಗೊಂಡಿರುವ ವೈದ್ಯೆ ಉಷಾ, ರಾಜ್ಯ ವೈದ್ಯಕೀಯ ಸಂಘಕ್ಕೆ ಪತ್ರ ಬರೆದು ಅಂದಿನ ಪರಿಸ್ಥಿತಿ ವಿವರಿಸಿದ್ದು, ತಾವು ತಪ್ಪಿತಸ್ಥರಲ್ಲ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಪತ್ರ ಬರೆದ ವೈದ್ಯೆ

ಅಮಾನತಾದ ಉಷಾ ತುಮಕೂರು ಜಿಲ್ಲಾಸ್ಪತ್ರೆಯ ಪ್ರಸೂತಿ ತಜ್ಞೆಯಾಗಿದ್ದು, ಏಕ ಪಕ್ಷೀಯವಾಗಿ ತಮ್ಮನ್ನು ಅಮಾನತು ಮಾಡಿದ್ದಾರೆ ಎಂದು ಪತ್ರ ಬರೆದಿದ್ದಾರೆ. ಒಂದು ವರ್ಷದಿಂದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಉಷಾ ಅವರು, ಘಟನೆ ನಡೆದ 02-11-22ರಂದು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ಕ್ಕೆ ಒಪಿಡಿಯಲ್ಲಿ ಕಾರ್ಯನಿರ್ವಹಿಸಿದ್ದೆ, ಬಳಿಕ 5.30ರಿಂದ 9.30ರ ವರೆಗೂ ಶಸ್ತ್ರ ಚಿಕಿತ್ಸೆ ನಡೆಸಿದ್ದೆ ಎಂದಿದ್ದಾರೆ.

ಶಸ್ತ್ರ ಚಿಕಿತ್ಸೆ ಮುಗಿಸಿ ಗರ್ಭಿಣಿ ಸ್ತ್ರಿ ಕೊಠಡಿಯತ್ತ ಹೋಗುತ್ತಿದ್ದ ವೇಳೆ ನಾನು (ವೈದ್ಯೆ ಉಷಾ), ಗರ್ಭಿಣಿ ಕಸ್ತೂರಿ ಮುಖಾಮುಖಿಯಾಗಿದ್ದೇವೆ.

ಘಟನೆ ಕುರಿತು ಪತ್ರ ಬರೆದ ವೈದ್ಯೆ
ಬಳಿಕ ಸ್ಟಾಫ್ ನರ್ಸ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಬಳಿ ಕಸ್ತೂರಿ ಬಗ್ಗೆ ಮತ್ತು ಅವರು ವಾಪಸ್ ಹೋಗುತ್ತಿರುವುದು ಯಾಕೆ ಎಂದು ವಿಚಾರಿಸಿದ್ದೆ. ಗರ್ಭಿಣಿ ಕಸ್ತೂರಿ ವೈಯಕ್ತಿಕ ಕಾರಣದಿಂದ ಚಿಕಿತ್ಸೆ ನಿರಾಕರಿಸಿ ವಾಪಸ್ ಹೋದರು ಎಂದು ನರ್ಸ್​ಗಳು ತಿಳಿಸಿದ್ದರು. ಕಸ್ತೂರಿ ಪಕ್ಕದ ಮನೆಯ ಸರೋಜಮ್ಮ ಬಲವಂತವಾಗಿ ಕಸ್ತೂರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.‌ ಈ ಎಲ್ಲ ವಿವರಗಳನ್ನು kgmoa ವೆಬ್ ಸೈಟ್ ನಲ್ಲಿ ದಾಖಲಿಸಿದ್ದೆ ಎಂದಿದ್ದಾರೆ.

ಕಸ್ತೂರಿಯನ್ನು ಬಲವಂತವಾಗಿ ಕರೆದುಕೊಂಡು ಬರಲಾಗಿತ್ತು ಎಂದು ಸಚಿವರಿಗೆ ಎಎಸ್ಐ ಮಾಹಿತಿ ನೀಡಿದ್ದರು. ಸಚಿವರು ಸಿಸಿಟಿವಿ ದೃಶ್ಯವಾಳಿಗಳನ್ನು ಕೂಡ ವೀಕ್ಷಿಸಿದ್ದಾರೆ. ಆದರೂ ಏಕ ಪಕ್ಷೀಯವಾಗಿ ಆಯುಕ್ತರು ಹಾಗೂ ಸಚಿವರು ನಮ್ಮನ್ನು ಅಮಾನತುಗೊಳಿಸಿದ್ದಾರೆ.
ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ತುಮಕೂರಿನಲ್ಲಿ ಬಾಣಂತಿ-ಅವಳಿ ಮಕ್ಕಳು ಸಾವು ಪ್ರಕರಣ: ನಾಲ್ವರು ಸಿಬ್ಬಂದಿ ಅಮಾನತು

ABOUT THE AUTHOR

...view details