ಕರ್ನಾಟಕ

karnataka

ETV Bharat / state

ಹಣ ಕೊಟ್ಟವರು, ಪಡೆದವರು, ಮಧ್ಯವರ್ತಿಗಳು ಎಲ್ಲರೂ ಜೈಲಿಗೆ ಹೋಗ್ತಾರೆ: ಆರಗ ಜ್ಞಾನೇಂದ್ರ - ಹಣ ಕೊಟ್ಟವರು, ಹಣ ಪಡೆದವರು, ಮಧ್ಯವರ್ತಿಗಳು ಎಲ್ಲಾರೂ ಜೈಲಿಗೆ ಹೋಗುತ್ತಾರೆ

ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಹಿಡಿದು ಜೈಲಿಗೆ ಹಾಕುತ್ತಿದ್ದೇವೆ. ಇನ್ಮೇಲೆ ಪರೀಕ್ಷೆಯಲ್ಲಿ ಅಕ್ರಮ ಮಾಡುವವರು 10 ಬಾರಿ ಎದೆಮುಟ್ಟಿ ನೋಡಿಕೊಳ್ಳಬೇಕು. ಆ ರೀತಿ ಮಾಡುತ್ತೇವೆ. ಹಣ ಕೊಟ್ಟವರು, ಹಣ ಪಡೆದವರು, ಮಧ್ಯವರ್ತಿಗಳು ಎಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Home Minister Aaraga Jnanendra
ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

By

Published : May 4, 2022, 3:11 PM IST

ತುಮಕೂರು:ಪಿಎಸ್​​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಅವರ ಮಕ್ಕಳು, ಹಣ ಕೊಟ್ಟವರು, ಹಣ ಪಡೆದವರು, ಮಧ್ಯವರ್ತಿಗಳು ಎಲ್ಲರೂ ಜೈಲಿಗೆ ಹೋಗುತ್ತಾರೆ. ಆರೋಪಿಗಳು ಯಾವುದೇ ಪಕ್ಷದವರಾಗಲಿ, ಜಾತಿಯವರಾಗಲಿ ಅವರಿಗೆ ಶಿಕ್ಷೆಯಾಗುತ್ತದೆ. ಈ ಜಾಲದ ತಾಯಿ ಬೇರನ್ನು ಹುಡುಕುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ನಗರದಲ್ಲಿಂದು ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಗೃಹ ಸಚಿವರು ಈ ಭರವಸೆಯನ್ನು ನೀಡಿದ್ದಾರೆ. ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಹಿಡಿದು ಜೈಲಿಗೆ ಹಾಕುತ್ತಿದ್ದೇವೆ. ಇನ್ಮುಂದೆ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರು 10 ಬಾರಿ ಎದೆಮುಟ್ಟಿ ನೋಡಿಕೊಳ್ಳಬೇಕು. ಸಾಧ್ಯವಾದ್ರೆ ಕಾನೂನಿಗೂ ತಿದ್ದುಪಡಿ ತರಲಿದ್ದೇವೆ. ಯಾರು ಕಷ್ಟಪಟ್ಟು ಪರೀಕ್ಷೆ ಬರೆಯುತ್ತಾರೋ ಅವರಿಗೆ ಕೆಲಸ ಸಿಗುವಂತಾಗಬೇಕು. ನಮಗೆ ಬದ್ಧತೆ ಇದೆ, ಹಾಗಾಗಿ ಇಷ್ಟೊಂದು ಮಂದಿ ಆರೋಪಿಗಳನ್ನು ಬಂಧಿಸುತ್ತಿದ್ದೇವೆ ಎಂದು ಗೃಹ ಸಚಿವರು ಹೇಳಿದರು.

ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿ ಮಾಡುತ್ತೇವೆ. ಪರೀಕ್ಷೆಯಲ್ಲಿ ಅಕ್ರಮ ನಡೆಯದ ಹಾಗೆ ನಮ್ಮ ಸರ್ಕಾರ ಇತಿಶ್ರೀ ಹಾಡಲಿದೆ. ನಮ್ಮ ಇಲಾಖೆಯಲ್ಲಿ ಅಕ್ರಮ ನೇಮಕಾತಿ ಆಗಲೇ ಇಲ್ಲ, ಅದನ್ನು ತಡೆಗಟ್ಟಿದ್ದೇವೆ. ನೇಮಕಾತಿ ಆಗುವ ಹಂತದಲ್ಲಿ ನನಗೆ ಮಾಹಿತಿ ಬಂದಾಗ, ಸೂಕ್ತ ದಾಖಲಾತಿ ಸಿಕ್ಕಿದೆ. ಕೇವಲ 2 ಗಂಟೆಯಲ್ಲಿ ಸಿಐಡಿ ತಂಡ ರಚನೆ ಮಾಡಲಾಗಿದೆ ಎಂದರು.

ಇದನ್ನೂ ಓದಿ:ರಾಜಕಾರಣ ಮಾಡಲಷ್ಟೇ ದಲಿತ ಸಿಎಂ ಚರ್ಚೆ.. ಯಾವ ಪಕ್ಷಕ್ಕೂ ಆ ಬಗ್ಗೆ ಬದ್ಧತೆ ಇಲ್ಲ.. ಸಚಿವ ನಾರಾಯಣಸ್ವಾಮಿ

ABOUT THE AUTHOR

...view details