ತುಮಕೂರು: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪಾವಗಡ ತಾಲೂಕಿನ ಸಿ.ಕೆ.ಪುರ ಗ್ರಾಮದ ಆನಂದರಾವ್ ಎಂಬವರ ಮನೆಗೆ ಭೇಟಿ ನೀಡಿದರು.
ತುಮಕೂರು ಆರ್ಎಸ್ಎಸ್ ಕಾರ್ಯಕರ್ತನ ಮನೆಗೆ ಮೋಹನ್ ಭಾಗವತ್ ಭೇಟಿ - Mohan Bhagwat visits RSS activist house
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಸಿ.ಕೆ.ಪುರ ಗ್ರಾಮದ ಆನಂದರಾವ್ ಎಂಬವರ ಮನೆಗೆ ಭೇಟಿ ನೀಡಿದರು.
ಆರ್ಎಸ್ಎಸ್ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸುದೀರ್ಘ ಸೇವೆ ಸಲ್ಲಿಸಿದ ಕುಟುಂಬಗಳ ಭೇಟಿ ನೀಡುವ ಉದ್ದೇಶದಿಂದ ಆನಂದರಾವ್ ಮನೆಗೆ ಭಾಗವತ್ ಭೇಟಿ ನೀಡಿದ್ದಾರೆ. ಮೊದಲು ಗ್ರಾಮದ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆರ್ಎಸ್ಎಸ್ನಿಂದ ಆಯೋಜಿಸಿದ್ದ ಸಾಂಕೃತಿಕ ಕಾರ್ಯಕ್ರಮದಲ್ಲಿ ಭಾಗವತ್ ಭಾಗವಹಿಸಿದರು.
ಇಂದು ಆನಂದರಾವ್ ಒಡೆತನದ ಜ್ಞಾನ ವಾಹಿನಿ ಶಾಲೆಗೆ ಭೇಟಿ ನೀಡಿ, ಬಳಿಕ ಪಟ್ಟಣದ ಶ್ರೀ ಶನಿ ಮಹಾತ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದ ಆಡಳಿತ ಮಂಡಳಿಯ ಸಭೆ ನಡೆಸಿ ನಿರ್ಗಮಿಸಲಿದ್ದಾರೆ. ಭಾಗವತ್ ಭೇಟಿ ಹಿನ್ನೆಲೆ ಸೂಕ್ತ ಭದ್ರತೆ ಕೈಗೊಂಡಿದ್ದು, ಕುಟುಂಬದ 21 ಜನರಿಗೆ ಮಾತ್ರ ಭಾಗವತ್ ಭೇಟಿಗೆ ಆವಕಾಶ ನೀಡಲಾಗಿದೆ.