ಕರ್ನಾಟಕ

karnataka

ETV Bharat / state

ಗೋಹತ್ಯೆ ನಿಷೇಧ ವಿಧೇಯಕ: ಬಿಎಸ್​ವೈಗೆ ಮೋದಿ ಸಹೋದರ ಅಭಿನಂದನೆ - Modi's brother Prahlad modhi congratulates BSY

ಹಿಂದೂ ಸಂಸ್ಕೃತಿಯಲ್ಲಿ ಗೋವನ್ನು ಕೇವಲ ಪ್ರಾಣಿಯೆಂದು ಗುರುತಿಸದೆ ತಾಯಿ ಸ್ಥಾನದಲ್ಲಿರಿಸಿ ಅನೇಕ ದೇವರನ್ನು ನಾವು ಕಾಣುತ್ತೇವೆ ಎಂದು ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ತಿಳಿಸಿದ್ದಾರೆ.

Prahlad modhi
ಪ್ರಹ್ಲಾದ್ ಮೋದಿ

By

Published : Dec 10, 2020, 3:56 PM IST

Updated : Dec 10, 2020, 4:12 PM IST

ತುಮಕೂರು: ವಿಧಾನಸಭೆಯಲ್ಲಿ ಸರ್ಕಾರ ಮಂಡಿಸಿದ ಗೋಹತ್ಯಾ ಪ್ರತಿಬಂಧಕ ಕಾನೂನಿಗೆ ಅಂಗೀಕಾರ ಪಡೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ತಿಳಿಸಿದ್ದಾರೆ.

ಬಿಎಸ್​ವೈಗೆ ಮೋದಿ ಸಹೋದರ ಪ್ರಹ್ಲಾದ್​ ಮೋದಿ ಅಭಿನಂದನೆ

ನಗರದಲ್ಲಿ ನಡೆದ ವೈಷ್ಣೋದೇವಿ ದೇಗುಲದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೂ ಸಂಸ್ಕೃತಿಯಲ್ಲಿ ಗೋವನ್ನು ಕೇವಲ ಪ್ರಾಣಿಯೆಂದು ಗುರುತಿಸದೆ ತಾಯಿ ಸ್ಥಾನದಲ್ಲಿರಿಸಿ ಅನೇಕ ದೇವರನ್ನು ನಾವು ಕಾಣುತ್ತೇವೆ ಎಂದರು.

ಓದಿ:ನೂತನ ಸಂಸತ್ ಭವನವು 'ಆತ್ಮನಿರ್ಭರ ಭಾರತ' ನಿರ್ಮಾಣಕ್ಕೆ ಸಾಕ್ಷಿ : ಭೂಮಿ ಪೂಜೆ ಬಳಿಕ ಮೋದಿ ಮಾತು

ಈ ಕಾನೂನು ಕೇವಲ ಧರ್ಮದ ವಿರುದ್ಧ ಆಗಲೀ, ಜಾತಿಯ ವಿರುದ್ಧವಾಗಲೀ ಅಲ್ಲ. ಇದು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕಾನೂನಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಮಹಾವೀರ, ಬುದ್ಧ ಹಾಗೂ ಗಾಂಧೀಜಿಯವರ ಚಿಂತನೆಗಳನ್ನು ನಾವು ಅರಿಯಬೇಕಿದೆ. ಅಹಿಂಸಾ ಪರಮೋಧರ್ಮ ಎಂಬ ಘೋಷವಾಕ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Last Updated : Dec 10, 2020, 4:12 PM IST

ABOUT THE AUTHOR

...view details