ಕರ್ನಾಟಕ

karnataka

ETV Bharat / state

ತುಮಕೂರಲ್ಲಿ ಭಾರಿ ಮಳೆಗೆ ನೆಲಕಚ್ಚಿದ ಮೊಬೈಲ್​​ ಟವರ್​​ - kannada news

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆ ಮೇಲೆ ಸ್ಥಾಪಿಸಿಲಾಗಿದ್ದ ಮೊಬೈಲ್ ಟವರ್ ನೆಲಕಚ್ಚಿದೆ.

ಭಾರಿ ಮಳೆಗೆ ನೆಲಕಚ್ಚಿದ ಮೊಬೈಲ್ ಟವರ್

By

Published : Apr 20, 2019, 5:53 PM IST

ತುಮಕೂರು:ಭಾರಿ ಮಳೆಗೆ ಮನೆ ಮೇಲೆ ಅಳವಡಿಸಿದ್ದ ಮೊಬೈಲ್ ಟವರ್ ಧರೆಗುರುಳಿ ಬಿದ್ದ ಘಟನೆ ನಗರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇನ್ನೊಂದೆಡೆ ನಗರದ ಆಂಜನೇಯ ದೇವಸ್ಥಾನ ಸಮೀಪವಿರೋ ನಾಗರಾಜ ಶೆಟ್ಟಿ ಎಂಬುವರ ಮನೆ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಕೆಳಗೆ ಉರುಳಿ ಬಿದ್ದಿತ್ತು.

ಭಾರಿ ಮಳೆಗೆ ನೆಲಕಚ್ಚಿದ ಮೊಬೈಲ್ ಟವರ್

ಸುಮಾರು 25 ಅಡಿ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿದ್ದ ಟವರ್ ಉರುಳಿಬಿದ್ದ ಪರಿಣಾಮ ಸುತ್ತಮುತ್ತಲಿನ ನಿವಾಸಿಗಳು ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಇಂದು ಬೆಳಗ್ಗೆ ಮೊಬೈಲ್ ಕಂಪನಿಯ ಸಿಬ್ಬಂದಿ ಕುಸಿದು ಬಿದ್ದಿದ್ದ ಟವರ್ ಬಿಡಿ ಭಾಗಗಳನ್ನು ತೆಗೆದರು.

ABOUT THE AUTHOR

...view details