ತುಮಕೂರು:ಶಿರಾ ತಾಲೂಕಿನ ಬೂವನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ನನ್ನ ಕಾಲಿಗೆ ಬೀಳಲು ಬಂದಾಗ ಅದನ್ನು ನಾನೇ ತಡೆದದ್ದು ಎಂದು ಶಾಸಕ ವೀರಭದ್ರಯ್ಯ ಸ್ಪಷ್ಟನೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ನನ್ನ ಕಾಲಿಗೆ ಬೀಳಲು ಬಂದಾಗ ನಾನೇ ತಡೆದೆ: ಶಾಸಕ ವೀರಭದ್ರಯ್ಯ ಸ್ಪಷ್ಟನೆ - ಶಾಸಕ ವೀರಭದ್ರಯ್ಯ ವೈರಲ್ ವಿಡಿಯೋ ಸುದ್ದಿ
ಶಿರಾ ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರಜ್ವಲ್ ರೇವಣ್ಣನವರ ಕಾಲಿಗೆ ಶಾಸಕ ವೀರಭದ್ರಯ್ಯ ಬೀಳಲು ಮುಂದಾದರು ಎಂಬಂತಹ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಶಾಸಕ ವೀರಭದ್ರಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ವೀರಭದ್ರಯ್ಯ ಸ್ಪಷ್ಟನೆ
ಈ ಘಟನೆಯನ್ನು ವ್ಯತಿರಿಕ್ತವಾಗಿ ವೈರಲ್ ಮಾಡುತ್ತಿರುವುದು ಸರಿಯಲ್ಲ. ಪ್ರಜ್ವಲ್ ರೇವಣ್ಣ ಅವರು ನನ್ನ ಮಗನಿಗೆ ಸಮಾನವಾದ ವಯಸ್ಸಿನವರು. ನಾನೇಕೆ ಅವರ ಕಾಲಿಗೆ ಬೀಳಲಿ. ಅವರೇ ನನ್ನ ಕಾಲಿಗೆ ಬೀಳಲು ಬಂದಾಗ ತಡೆದಿದ್ದೇನೆ. ಆದರೆ, ಇದನ್ನು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.