ತುಮಕೂರು :ಇರುವ ನಾಯಕರ ಮೇಲೆ ಮತ್ತೊಬ್ಬ ಮುಖಂಡರನ್ನು ಎತ್ತಿ ಕಟ್ಟುವುದು ಜೆಡಿಎಸ್ ಪಕ್ಷದಲ್ಲಿ ನಡೆದುಕೊಂಡು ಬಂದಿರುವ ನಡವಳಿಕೆಯಾಗಿದೆ ಎಂದು ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿದರು.
ಸ್ವಪಕ್ಷದ ವಿರುದ್ಧವೇ ಗುಡುಗಿದ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಯಾರೂ ಸಿಕ್ಕಿರಲಿಲ್ಲ. ಇದೀಗ ಮತ್ತೊಬ್ಬ ಮುಖಂಡರನ್ನು ಕ್ಷೇತ್ರಕ್ಕೆ ಕರೆ ತಂದು ಪರಿಚಯಿಸುತ್ತಿದ್ದಾರೆ. ಇರುವವರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟಿದ್ದಾರೆ ಅಷ್ಟೇ ಎಂದರು.
ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿಯೂ ಇಬ್ಬರು ಜೆಡಿಎಸ್ ಮುಖಂಡರನ್ನು ಇಟ್ಟಿರುತ್ತಾರೆ. ಅದೇ ರೀತಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ. ನಾನು ಎಲ್ಲಿಯೂ ಕೂಡ ಪಕ್ಷ ಬಿಡುತ್ತೇನೆ ಎಂದು ಹೇಳಿಕೆ ನೀಡಿಲ್ಲ. ಅದರ ಹೊರತಾಗಿಯೂ ಅವರು ಮತ್ತೊಬ್ಬರನ್ನು ತಂದು ಕ್ಷೇತ್ರದಲ್ಲಿ ಪರಿಚಯಿಸುತ್ತಾರೆ ಎಂದರೆ ನನ್ನದೇನು ಅಭ್ಯಂತರ ಇಲ್ಲ ಎಂದರು.
ಇದನ್ನೂ ಓದಿ: Shocking: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ!?