ತುಮಕೂರು:ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಕೊಡಬೇಕು ಎಂದು ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಎಸ್ ಆರ್ ಶ್ರೀನಿವಾಸ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಡಾ. ಜಿ ಪರಮೇಶ್ವರ್ ಅವರು ಹಿರಿಯ ನಾಯಕರು, ಅವರಿಗೆ ಸಿಎಂ ಸ್ಥಾನ ಕೊಟ್ಟರೆ ಸಂತೋಷ. ಆದರೆ ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ, ಅದಕ್ಕೆ ನಾವೆಲ್ಲ ಬದ್ಧರಾಗಿರಬೇಕು ಎಂದು ಹೇಳಿದರು.
ಜಿ. ಪರಮೇಶ್ವರ್ ಹಿರಿಯ ನಾಯಕರು, ಸಿಎಂ ಸ್ಥಾನ ಕೊಟ್ಟರೆ ಸಂತೋಷ: ಎಸ್ ಆರ್ ಶ್ರೀನಿವಾಸ್ - mla sr srinivas batting for g parameshwar
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರದೇ ಇದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಪಕ್ಷ ವಿಸರ್ಜನೆ ಮಾಡಿ ತೋರಿಸಲಿ ಎಂದು ಕಾಂಗ್ರೆಸ್ ವಿಜೇತ ಅಭ್ಯರ್ಥಿ ಎಸ್. ಆರ್. ಶ್ರೀನಿವಾಸ್ ಸವಾಲ್ ಹಾಕಿದರು.
ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಕೆಟ್ಟದಾಗಿದೆ, ಅಧಿಕಾರಕ್ಕೆ ಬರದೇ ಇದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಹಿಂದೆ ಹೇಳಿದಂತೆ ಈಗ ಪಕ್ಷ ವಿಸರ್ಜನೆ ಮಾಡಿ ತೋರಿಸಲಿ. ಮಂಡ್ಯ ಜಿಲ್ಲೆಯ ಪರಿಸ್ಥಿತಿ ನೋಡಿದರೆ ಜನರ ತೀರ್ಮಾನ ಗೊತ್ತಾಗುತ್ತದೆ. ಬರೀ ಬ್ಲಾಕ್ ಮೇಲ್ ಮಾಡಿ ಈ ಸ್ಥಿತಿಗೆ ಬಂದಿದ್ದಾರೆ. ರಾಮನಗರದಲ್ಲಿ ನಿಖಿಲ್ಗೆ ಸೋಲಾಗಿದೆ. ಅಲ್ಲೇ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಮತ್ತೆ ನನ್ನ ಸೋಲಿಸಲು ಹೊರಟಿದ್ದರು. ರಾಮನಗರದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಕುಟುಂಬ ರಾಜಕಾರಣಕ್ಕೆ ಕಲಿಸಿದ ಪಾಠ ಇದು. ಇನ್ನೂ ಇಬ್ಬರನ್ನು ಸೋಲಿಸಿ ಜನರು ಕುಟುಂಬ ರಾಜಕಾರಣಕ್ಕೆ ಪಾಠ ಕಲಿಸಬೇಕು ಎಂದು ಶ್ರೀನಿವಾಸ್ ಹೇಳಿದ್ರು.
ಇದನ್ನೂ ಓದಿ:ಇದು ಪ್ರಧಾನಿ ಮೋದಿ ಸೋಲಲ್ಲ, ಕಾಂಗ್ರೆಸ್ ನಾಯಕತ್ವ ದೇಶದಲ್ಲೇ ಸೋತಿದೆ: ಬೊಮ್ಮಾಯಿ