ಕರ್ನಾಟಕ

karnataka

ಕೊರೊನಾ ವೇಳೆ ಶಾಸಕಾಂಗ ಸಭೆ ಅವಶ್ಯಕತೆ ಇಲ್ಲ: ರೇಣುಕಾಚಾರ್ಯ

By

Published : Jul 1, 2021, 2:34 AM IST

ಕೋವಿಡ್ ಸಂದರ್ಭದಲ್ಲಿ ಶಾಸಕಾಂಗ ಸಭೆ ಸೇರೋದು ನಿಯಮ ಉಲ್ಲಂಘನೆ ಆಗುತ್ತದೆ ಎಂದ ರೇಣುಕಾಚಾರ್ಯ ಶಾಸಕಾಂಗ ಸಭೆ ಸೇರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

mla-renukacharya-on-legislative-meeting
ಕೊರೊನಾ ವೇಳೆ ಶಾಸಕಾಂಗ ಸಭೆ ಅವಶ್ಯಕತೆ ಇಲ್ಲ: ರೇಣುಕಾಚಾರ್ಯ

ತುಮಕೂರು: ಶಾಸಕಾಂಗ ಸಭೆ ಕರೆಯೋದು ಮುಖ್ಯಮಂತ್ರಿಗಳ ಪರಮಾಧಿಕಾರ, ಆದರೆ ಕೊರೊನಾ ಸಂದರ್ಭದಲ್ಲಿ ಶಾಸಕಾಂಗ‌ ಸಭೆ ಕರೆಯೋದು ಅವಶ್ಯ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಪಕ್ಷದ ರಾಜ್ಯ ಉಸ್ತುವಾರಿಗಳು ಬಂದು ಎಲ್ಲಾ ಶಾಸಕರ ಅಹವಾಲು ಆಲಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಶಾಸಕಾಂಗ ಸಭೆ ಸೇರೋದು ನಿಯಮ ಉಲ್ಲಂಘನೆ ಆಗುತ್ತದೆ ಎಂದರು.

ಶಾಸಕ ರೇಣುಕಾಚಾರ್ಯ

ವಿಜಯೇಂದ್ರಗೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆಸಕ್ತಿ ಇಲ್ಲ. ಸಿಎಂ ಯಡಿಯೂರಪ್ಪ ಕೂಡ ಪುತ್ರ ವಿಜಯೇಂದ್ರ ಯಾವ ಉಪಚುನಾವಣೆಯಲ್ಲೂ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಅವರು ಯಾವ ಉಪಚುನಾವಣೆಯಲ್ಲೂ ಸ್ಪರ್ಧೆ ಮಾಡಲ್ಲ ಎಂದರು.

ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ‌..!

ABOUT THE AUTHOR

...view details