ತುಮಕೂರು: ಕೊರೊನಾ ಸೋಂಕಿಗೆ ಒಳಗಾಗಿರೋ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಕಾರ್ಯಕರ್ತರು ಯಡಿಯೂರಿನ ಸಿದ್ಧಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಾಸಕ ರಂಗನಾಥ್ ಕೊರೊನಾದಿಂದ ಗುಣಮುಖರಾಗಲಿ ಎಂದು ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ - Tumkur Siddhalingeshwara Temple
ಜನಪ್ರತಿನಿಧಿಗಳಿಗೂ ಕೊರೊನಾ ದೃಢವಾಗುತ್ತಿದೆ. ನಿನ್ನೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ಗೆ ಕೊರೊನಾ ದೃಢವಾಗಿದ್ದು, ಇಂದು ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೊರೊನಾದಿಂದ ಗುಣಮುಖರಾಗುವಂತೆ ಇಲ್ಲಿನ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಶಾಸಕ ರಂಗನಾಥ್ ಕೊರೊನಾದಿಂದ ಗುಣಮುಖರಾಗಲಿ ಎಂದು ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ
ರಾಜೋಪಚಾರ ರಥೋತ್ಸವ ಅಷ್ಟೋತ್ತರ ಪೂಜೆಯನ್ನು ನೆರವೇರಿಸಿ ಶಾಸಕರು ಕೊರೊನಾದಿಂದ ಮುಕ್ತಿ ಪಡೆಯಲಿ ಎಂದು ಬೇಡಿಕೊಂಡಿರು.
ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಗೋವಿಂದರಾಜು, ಕಾಂಗ್ರೆಸ್ ಮುಖಂಡ ವೈ.ವಿ. ಕೆಂಪಣ್ಣ ಸೇರಿದಂತೆ ಪ್ರಮುಖ ಮುಖಂಡರು ಪೂಜೆಯಲ್ಲಿ ಪಾಲ್ಗೊಂಡಿದ್ದರು.