ಕರ್ನಾಟಕ

karnataka

ETV Bharat / state

ಅಲ್ಪಸಂಖ್ಯಾತ ಸಮುದಾಯದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ಮುಖಂಡರು ನಿಗಾವಹಿಸಿ: ಜ್ಯೋತಿ ಗಣೇಶ್

ಲಸಿಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಕಾರಾತ್ಮಕ ಅಪಪ್ರಚಾರದಿಂದ ಜನಾಂಗದವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಧರ್ಮಗುರುಗಳು ಮಸೀದಿಗಳಲ್ಲಿ ಲಸಿಕೆ ಪಡೆಯುವಂತೆ ಅನೌನ್ಸ್ ಮಾಡಿ ಜನರಲ್ಲಿ ಅರಿವು ಮೂಡಿಸಲು ಶಾಸಕ ಜ್ಯೋತಿ ಗಣೇಶ್ ಮನವಿ ಮಾಡಿದರು.

mla jyothi ganesh
mla jyothi ganesh

By

Published : May 30, 2021, 9:16 AM IST

ತುಮಕೂರು:ನಗರದಲ್ಲಿರುವ ಎಲ್ಲಾ ಅಲ್ಪಸಂಖ್ಯಾತರು ಲಸಿಕೆ ಹಾಕಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ತಮ್ಮ ಜನಾಂಗದವರಿಗೆ ಅರಿವು ಮೂಡಿಸುವ ಮೂಲಕ ಲಸಿಕಾಕರಣವನ್ನು ಯಶಸ್ವಿಗೊಳಿಸುವಂತೆ ಶಾಸಕ ಜ್ಯೋತಿ ಗಣೇಶ್ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಲಸಿಕಾಕರಣದ ಸಂಬಂಧ ಅಲ್ಪಸಂಖ್ಯಾತರ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತ ಸಮುದಾಯದ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಇದರ ಬಗ್ಗೆ ಜನಾಂಗದ ಮುಖಂಡರುಗಳು ತಮ್ಮ ಜನರಿಗೆ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕೆಂದು ಸಲಹೆ ನೀಡಿದರು. ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಅಲ್ಪ ಸಂಖ್ಯಾತ ಸಮುದಾಯದ ಮುಖಂಡರು ತಮ್ಮ ಜನಾಂಗದಲ್ಲಿ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಮೊದಲು ಲಸಿಕೆ ಹಾಕಿಸಬೇಕು ಎಂದರು.

ಮೊದಲು ಹಿರಿಯ ನಾಗರಿಕರಿಗೆ ಲಸಿಕೆ ಹಾಕಿಸಿ. ಅನುಕೂಲಕ್ಕೆ ತಕ್ಕಂತೆ ತಮ್ಮ ವಾರ್ಡ್​ನಲ್ಲಿಯೇ ಲಸಿಕಾ ಕೇಂದ್ರ ತೆರೆಯುವ ಮೂಲಕ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸಿಕೊಂಡವರಿಗೆ ಸೋಂಕು ಬಂದರೂ ಅವರು ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಕಡಿಮೆ ಇರುತ್ತದೆ. ಈ ಬಗ್ಗೆ ಅರಿವು ಮೂಡಿಸಿ ಲಸಿಕೆ ಹಾಕಿಸಬೇಕು ಎಂದರು.

ಧರ್ಮ ಗುರುಗಳು ಮಸೀದಿಗಳಲ್ಲಿ ಲಸಿಕೆ ಪಡೆಯುವಂತೆ ಅನೌನ್ಸ್ ಮಾಡಿಬೇಕು. ತುಮಕೂರು ನಗರದಲ್ಲಿ ಸುಮಾರು 11ರಿಂದ 12 ವಾರ್ಡ್​ಗಳಲ್ಲಿ ಅಲ್ಪಸಂಖ್ಯಾತ ಜನರ ಸಂಖ್ಯೆ ಹೆಚ್ಚಾಗಿದೆ. ಅಂತಹ ವಾರ್ಡ್​ಗಳಲ್ಲಿ ಧರ್ಮಗುರುಗಳಿಂದ ಮಸೀದಿಗಳಲ್ಲಿ ಲಸಿಕೆ ಪಡೆಯುವಂತೆ ಅನೌನ್ಸ್ ಮಾಡಿಸಬೇಕಿದೆ ಎಂದು ಮಾಜಿ ಶಾಸಕ ರಫೀಕ್ ಅಹಮದ್ ತಿಳಿಸಿದರು.

ಲಸಿಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಕಾರಾತ್ಮಕ ಅಪ ಪ್ರಚಾರದಿಂದ ಜನಾಂಗದವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಸಮುದಾಯದ ಅನೇಕ ಮುಖಂಡರು, ವಿದ್ಯಾವಂತರು ಲಸಿಕೆ ಪಡೆದಿದ್ದಾರೆ. ಆದರೆ, ತಿಳುವಳಿಕೆಯಿಲ್ಲದ ಕೆಲವರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಹಾಗಾಗಿ ಲಸಿಕೆ ಪ್ರಯೋಜನದ ಬಗ್ಗೆ ಜಿಲ್ಲಾಡಳಿತ ಹೆಚ್ಚು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು. ಲಸಿಕೆ ಪಡೆಯಲು ವಾರ್ಡ್​ವಾರು ಕಮಿಟಿ ಮಾಡಿ ಆ ಮೂಲಕ ಲಸಿಕೆ ಹಾಕಿಸಲು ಮುಂದಾಗಬೇಕಿದೆ. ಅಲ್ಲದೆ ಮೊದಲು ಮುಖಂಡರುಗಳಿಗೆ ಲಸಿಕೆ ಹಾಕಿಸಿಕೊಂಡಲ್ಲಿ ಉಳಿದವರು ಪ್ರೇರೇಪಿತರಾಗಿ ಲಸಿಕೆ ಪಡೆಯುತ್ತಾರೆ. ಇದಲ್ಲದೆ ವಾರ್ಡ್ ಗಳಲ್ಲಿ ಸಾಮಾಜಿಕ ಬದ್ಧತೆ ಹಾಗೂ ಜನರೊಂದಿಗೆ ನಿಕಟ ಸಂಪರ್ಕವಿರುವವರ ಮಾತನ್ನು ಕೇಳುವಂತಹ ಕೆಲವು ಯುವಕರಿಗೂ ಲಸಿಕೆ ನೀಡಬೇಕು. ಬಳಿಕ ಲಸಿಕೆ ಪಡೆದ ಯುವಕರ ಮೂಲಕವೂ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಾರೆಂದು ಸಭೆಯಲ್ಲಿದ್ದ ಮುಖಂಡರು ಸಲಹೆಯಿತ್ತರು.

ಸಭೆಯಲ್ಲಿ ಪಾಲಿಕೆ ಉಪಮೇಯರ್ ನಾಜೀಮಾ ಬಿ., ಸದಸ್ಯ ನಯಾಜ್ ಅಹಮದ್, ಮುಖಂಡರಾದ ಇಕ್ಬಾಲ್, ತಾಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಪ್ರಯಾಣಿಕರ ಸಂಖ್ಯೆ ಇಳಿಮುಖ: ತುಮಕೂರು ರೈಲ್ವೆ ನಿಲ್ದಾಣದ ಕ್ಯಾಂಟೀನ್​ಗಳಲ್ಲಿ ವ್ಯಾಪಾರ ಕುಂಠಿತ!

For All Latest Updates

ABOUT THE AUTHOR

...view details