ತುಮಕೂರು: ದಾರಿ ಮಧ್ಯೆ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿ ನೆರವಿಗೆ ಬಂದು ಶಾಸಕ ಮಸಾಲೆ ಜಯರಾಮ್ ಮಾನವೀಯತೆ ಮೆರೆದಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡ ದಂಪತಿ: ನೆರವಿಗೆ ಬಂದು ಮಾನವೀಯತೆ ಮೆರೆದ ಶಾಸಕ - ರಸ್ತೆ ಅಪಘಾತದಲ್ಲಿ ಗಾಯಗೊಂಡ ದಂಪತಿ ಶಾಸಕ ಸಹಾಯ
ತುರುವೇಕೆರೆ ಮತ್ತು ದಬ್ಬೆಘಟ್ಟ ನಡುವಿನ ರಸ್ತೆಯ ಸೂಳೆಕೆರೆ ಬಳಿ ದಂಪತಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ದಂಪತಿಗೆ ಶಾಸಕ ಮಸಾಲೆ ಜಯರಾಮ್ ಸಹಾಯ ಮಾಡಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡ ದಂಪತಿ ಶಾಸಕ ಸಹಾಯ
ತುರುವೇಕೆರೆ ಮತ್ತು ದಬ್ಬೆಘಟ್ಟ ನಡುವಿನ ರಸ್ತೆಯ ಸೂಳೆಕೆರೆ ಬಳಿ ದಂಪತಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ಗಾಯಗೊಂಡಿದ್ದ ರಂಗಪ್ಪ ಮತ್ತು ಪಂಕಜಮ್ಮ ದಂಪತಿಯನ್ನು ಅದೇ ದಾರಿಯಲ್ಲಿ ತೆರಳುತ್ತಿದ್ದ ಶಾಸಕ ಮಸಾಲೆ ಜಯರಾಮ್ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಬಂದರು.
ಆಂಬ್ಯುಲೆನ್ಸ್ ಗೆ ಕರೆ ಮಾಡಿ ಗಾಯಾಳುಗಳನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶಾಸಕರ ಈ ಮಾನವೀಯ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
TAGGED:
Tumakuru news