ಕರ್ನಾಟಕ

karnataka

ETV Bharat / state

ಸೀಲ್​ಡೌನ್​​ ಪ್ರದೇಶದ ಜನರಿಗೆ ಧೈರ್ಯ ತುಂಬುತ್ತಿದ್ದೇವೆ.. ಶಾಸಕ ಗೌರಿಶಂಕರ್ - ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣ

ಗ್ರಾಮೀಣ ಭಾಗದಲ್ಲಿ ಜನರಿಗೆ ಸ್ವಚ್ಛತೆ ಕುರಿತು ಒಂದು ಅರಿವು ಮೂಡಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಇಲ್ಲದಿರುವುದು ಕೂಡ ಗಮನಾರ್ಹ..

MLA Gourishankar
ಶಾಸಕ ಡಿ.ಸಿ. ಗೌರಿಶಂಕರ್

By

Published : Jul 19, 2020, 3:21 PM IST

ತುಮಕೂರು :ಅನ್ಯ ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ರೇ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದೆ. ಮುಖ್ಯವಾಗಿ ಜನರಲ್ಲಿ ಜಾಗೃತಿ ಉಂಟಾಗಿರುವುದು ಇದಕ್ಕೆ ಕಾರಣ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿಯೂ ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಕೈಗೊಳ್ಳಬೇಕಾದಂತಹ ಕ್ರಮಗಳನ್ನು ಜನರು ಅನುಸರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದರು.

ಕೊರೊನಾ ಕುರಿತಂತೆ ಶಾಸಕ ಡಿ ಸಿ ಗೌರಿಶಂಕರ್

ಇನ್ನು, ಸೋಂಕಿತರು ಪತ್ತೆಯಾದ ಸ್ಥಳಗಳಲ್ಲಿ ನಿಯಮದಂತೆ ಸೀಲ್​​ಡೌನ್ ಮಾಡಲಾಗುತ್ತಿದೆ. ಅಂತಹ ಪ್ರದೇಶಗಳ ಸಮೀಪ ತೆರಳಿ ಅಲ್ಲಿನ ಜನರಿಗೆ ಮಾನಸಿಕವಾಗಿ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಜನರಲ್ಲಿ ಒಂದು ರೀತಿ ಸೋಂಕಿನ ಕುರಿತು ಜಾಗೃತಿಯ ಸಂದೇಶ ರವಾನೆಯಾಗುತ್ತಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಜನರಿಗೆ ಸ್ವಚ್ಛತೆ ಕುರಿತು ಒಂದು ಅರಿವು ಮೂಡಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಇಲ್ಲದಿರುವುದು ಕೂಡ ಗಮನಾರ್ಹ ಎಂದು ತಿಳಿಸಿದರು.

ABOUT THE AUTHOR

...view details