ತುಮಕೂರು:ಕ್ಯಾತ್ಸಂದ್ರ ಪೊಲೀಸ್ ಠಾಣೆ ಮತ್ತು ಜಿಲ್ಲಾ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ಗಳು ಇಸ್ಪೀಟ್ ದಂಧೆಕೋರರಿಂದ ತಿಂಗಳ ಮಾಮೂಲಿ ನಿಗದಿಪಡಿಸಿಕೊಳ್ಳಲು ಓಡಾಡುತ್ತಿರುವ ಮಾಹಿತಿ ಬಂದಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ಗಳ ವಿರುದ್ಧ ಶಾಸಕ ಗೌರಿಶಂಕರ್ ಆಕ್ರೋಶ - ಸಬ್ ಇನ್ಸ್ಪೆಕ್ಟರ್
ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸ್ ಠಾಣೆ ಮತ್ತು ಜಿಲ್ಲಾ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ಗಳು ಇಸ್ಪೀಟ್ ದಂಧೆಕೋರರಿಂದ ತಿಂಗಳ ಮಾಮೂಲಿ ನಿಗದಿಪಡಿಸಿಕೊಳ್ಳಲು ಓಡಾಡುತ್ತಿರುವ ಮಾಹಿತಿ ಬಂದಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕರು, ಇಸ್ಪೀಟ್ ಆಡುವವರ ಬಳಿ ಮತ್ತು ಮರಳು ಮಾಫಿಯಾದವರ ಬಳಿ ರಾತ್ರಿ ವೇಳೆ ಕಮಿಷನ್ ಪಡೆಯಲು ಅಲೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವರ್ಗಾವಣೆ ಆಗಿ ಬಂದು ಸುಮಾರು 15ರಿಂದ 20 ದಿನಗಳು ಕಳೆದಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಗಮನಹರಿಸದೆ ಮರಳು ಮಾಫಿಯಾ ಮತ್ತು ಇಸ್ಪೀಟ್ ದಂಧೆಯವರ ಬಳಿ ಕಮಿಷನ್ ನಿಗದಿಪಡಿಸಿಕೊಳ್ಳಲು ಓಡಾಡುತ್ತಿದ್ದಾರೆ ಎಂದು ಸಾರ್ವಜನಿಕರು ನನಗೆ ಮಾಹಿತಿ ನೀಡಿದ್ದಾರೆ ಎಂದರು.
ಇನ್ನು ತಕ್ಷಣ ಎಚ್ಚೆತ್ತುಕೊಂಡು ಪೊಲೀಸ್ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅಮಾನತು ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಸಭೆಯಲ್ಲಿ ಎಚ್ಚರಿಕೆ ನೀಡಿದರು. ಅಲ್ಲದೆ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗೆ ಬಾರದ ಈ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ಗಳಿಗೆ ಹಣ ವಸೂಲಿಯ ದಂಧೆಗೆ ಹೋಗಲು ಸಮಯವಿದೆಯೇ ಎಂದು ಇದೇ ವೇಳೆ ಗುಡುಗಿದರು.