ತುಮಕೂರು:ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್ಗಳಾದ 257 ಆಶಾ ಕಾರ್ಯಕರ್ತೆಯರಿಗೆ ಶಾಸಕ ಡಿ. ಸಿ. ಗೌರಿಶಂಕರ್ ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಿದರು.
ಗೂಳೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್, ಅರಿಶಿನ-ಕುಂಕುಮ, ಬಳೆ, ಸೀರೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಹೂ ಮಳೆ ಸುರಿಸಿ ಅಭಿನಂದನೆ ಇದೇ ವೇಳೆ ಮಾತನಾಡಿದ ಡಿ. ಸಿ. ಗೌರಿಶಂಕರ್, ಸಂಸ್ಕೃತಿ ಮತ್ತು ಭಾವನೆಗಳಿಗೆ ಗೌರವ ಕೊಡಬೇಕು ಎಂಬ ಉದ್ದೇಶದಿಂದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸುತ್ತಿದ್ದೇನೆ. ಅಲ್ಲದೆ ನಾವು ಜನಪ್ರತಿನಿಧಿಗಳು ಮತ್ತು ನೀವು ಆಶಾ ಕಾರ್ಯಕರ್ತೆಯರು ಎಂಬ ಭೇದಭಾವವಿಲ್ಲದೆ ನಿಮ್ಮ ಕೆಲಸಕ್ಕೆ ಗೌರವಿಸುತ್ತಿದ್ದೇನೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಹೂ ಮಳೆ ಸುರಿಸಿ ಅಭಿನಂದನೆ ಲಾಕ್ಡೌನ್ ಮುಗಿಯುವವರೆಗೂ ಗ್ರಾಮೀಣ ಪ್ರದೇಶದಲ್ಲಿ ಯಾರೇ ಸಂಕಷ್ಟದಲ್ಲಿದ್ದರೂ, ಅವರ ನೆರವಿಗೆ ಬರಲು ನಾನು ಸಿದ್ಧನಿದ್ದೇನೆ. ಅಲ್ಲದೇ ಜನರ ಸಮಸ್ಯೆಗಳು ತಮ್ಮ ಅರಿವಿಗೆ ಬಂದರೆ ನನ್ನ ಗಮನಕ್ಕೆ ದಯವಿಟ್ಟು ತನ್ನಿ ಎಂದು ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದರು.