ಕರ್ನಾಟಕ

karnataka

ETV Bharat / state

ವಾಹನಗಳ ಮೇಲೆ ದುಷ್ಕರ್ಮಿಗಳ ಕೆಂಗಣ್ಣು.. ತುಮಕೂರಲ್ಲಿ 10ಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ತೂರಾಟ! - miscreants damage cars

ನಗರದ ಶ್ರೀರಾಮನಗರ ಹಾಗು ಆರ್.ಟಿ ನಗರದಲ್ಲಿ ಕಳೆದ ರಾತ್ರಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಕಿಟಕಿ ಗಾಜುಗಳನ್ನು ಯಾರೋ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ‌.

some were damaged the cars
ಕಾರುಗಳ ಮೇಲೆ ಕಲ್ಲು ತೂರಾಟ

By

Published : Jun 23, 2021, 4:17 PM IST

Updated : Jun 23, 2021, 4:34 PM IST

ತುಮಕೂರು:ರಾತ್ರೋರಾತ್ರಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ರಾತ್ರಿ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳ ಮೇಲೆ ಕೀಚಕರು ಕಲ್ಲು ತೂರಾಟ ನಡೆಸಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

0ಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ತೂರಾಟ

ನಗರದ ಶ್ರೀರಾಮನಗರ ಹಾಗು ಆರ್.ಟಿ ನಗರದಲ್ಲಿ ಕಳೆದ ರಾತ್ರಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿ ಅಟ್ಟಹಾಸ ಮೆರೆದಿದ್ದಾರೆ. ಮನಸೋಇಚ್ಛೆ ಕಲ್ಲು ತೂರಾಟ ನಡೆಸಿದ್ದು, 10ಕ್ಕೂ ಹೆಚ್ಚು ಕಾರುಗಳು ಜಖಂ ಆಗಿವೆ. ಇದ್ರಿಂದ ಅಪಾರ ನಷ್ಟ ಸಂಭವಿಸಿದ್ದು, ವಾಹನ ಮಾಲೀಕರು ಕಂಗಾಲಾಗಿದ್ದಾರೆ‌.

ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ‌.

ಇದನ್ನೂ ಓದಿ:ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ!

Last Updated : Jun 23, 2021, 4:34 PM IST

ABOUT THE AUTHOR

...view details