ತುಮಕೂರು: ಖಾತೆ ಹಂಚಿಕೆಯಲ್ಲಿ ಯಾವುದೇ ಅಸಮಾಧಾನ ಇಲ್ಲವೆಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಎಂಟಿಬಿಗೆ ಅಬಕಾರಿ ಖಾತೆ ಕೊಟ್ಟಿದ್ರು ಅದರಲ್ಲಿ ಜನರಿಗೆ ಸ್ಪಂದಿಸಲು ಆಗಲ್ಲ. ಜನರಿಗೆ ಸ್ಪಂದಿಸುವ ಖಾತೆ ಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದರು ಎಂದರು.
ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ ಎಂಟಿಬಿಗೆ ಆ ಖಾತೆ ಸರಿಹೋಗಲ್ಲ ಅನ್ಸುತ್ತೆ. ಅತೃಪ್ತರು ಯಾರು ಇಲ್ಲ ಬೇಜಾರಿದ್ದಾಗ ಹೇಳ್ತಾರೆ ಅಷ್ಟೇ. ಇಲ್ಲಿ ಯಾವುದೇ ಖಾತೆಗೆ, ಯಾರು ಬೇಡಿಕೆ ಇಟ್ಟಿರಲಿಲ್ಲ. ನನಗೆ ಸಹಕಾರಿ ಖಾತೆ ಕೊಟ್ಟಿದ್ದಾರೆ, ನಾನು ಸಂತೋಷವಾಗಿದಿನಿ. ನನ್ನ ಕೈಯಲ್ಲಿ ಏನು ಅಳಿಲು ಸೇವೆ ಮಾಡೋಕಾಗುತ್ತೊ ಮಾಡುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದರು.
ನಾವೇನು ಮೈಸೂರಿನಲ್ಲಿ ಕೂತ್ಕೊಳೊಕಾಗುತ್ತಾ..? ಯಾರಿಗೆ ಇನ್ಚಾರ್ಜ್ ಕೊಡಲಿ ಅಲ್ಲಿನ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡಬೇಕು. ನಮಗೆ ಮೈಸೂರೇ ಇರಬೇಕು ಮತ್ತೊಂದು ಇರ್ಬೇಕು ಅಂತೇನಿಲ್ಲ. ಮುಖ್ಯಮಂತ್ರಿಗಳು ವಿಶ್ವಾಸ ಇಟ್ಟು ಮೈಸೂರು ಕೊಟ್ಟಿದಾರೆ. ಎಲ್ಲರನ್ನ ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡುತ್ತಾ ಇದ್ದೇನೆ. ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಆದರೂ ಎಮ್ ಎಲ್ ಸಿ ಮಾಡಿದ್ದಾರೆ. ಯಾವುದೇ ಮೂಲೆಗುಂಪು ಮಾಡಿಲ್ಲ ಎಂದು ಸಚಿವ ಸೋಮಶೇಖರ್ ಹೇಳಿದರು.
ಓದಿ : ನೇತಾಜಿ ಸುಭಾಷ್ ಚಂದ್ರ ಬೋಸ್ 125 ನೇ ಜನ್ಮದಿನ; ವೀರ ಸೇನಾನಿಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ