ಕರ್ನಾಟಕ

karnataka

ETV Bharat / state

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ - ಕೆಡಿಪಿ ಸಭೆ

ಕೆಡಿಪಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಹಿತಿ ನೀಡುವ ಹಾಗಿದ್ರೆ ನೀಡಿ ಇಲ್ಲ ಅಂದ್ರೆ ಆಚೆ ಹೋಗಿ ಎಂದು ಖಡಕ್ಕಾಗಿ ಸೂಚಿಸಿದರು.

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ

By

Published : Oct 19, 2019, 10:10 PM IST

ತುಮಕೂರು‌:ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಹಾಜರಾಗಿದ್ದಕ್ಕೆ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಕೆಂಡಾಮಂಡಲರಾದರು.

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಆಕ್ರೋಶ

ತಿಪಟೂರು ತಾಲೂಕಿನ ಬಗ್ಗೆ ಮಾಹಿತಿ ನೀಡುತ್ತಿದ್ದ ಸಹಾಯಕ ಅಧಿಕಾರಿಯನ್ನು, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ ಸಚಿವರು, ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಭೆ ಹಾಜರಾಗದೆ ಅಸಿಸ್ಟೆಂಟ್​ನನ್ನು ಸಭೆಗೆ ಕಳುಹಿಸಿರುವುದನ್ನು ತಿಳಿದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ್ರು.

ಯಾತಕ್ಕೆ ಇದ್ದಿರಿ ಇಲ್ಲಿ..? ಈ ಮುಂಚೆಯೇ ಕ್ಲಿಯರ್ ಕಟ್ಟಾಗಿ ಜಿಲ್ಲಾಧಿಕಾರಿ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಡ್​ಗಳು ಸಭೆಗೆ ಹಾಜರಾಗದಂತೆ ಎಂದು ಮಾಧುಸ್ವಾಮಿ ತಿಳಿಸಿದರು.

ABOUT THE AUTHOR

...view details