ತುಮಕೂರು: ಪಂಜಾಬ್ ರಾಜ್ಯದಲ್ಲಿ ಪ್ರವಾಸ ಮಾಡಿ ನಾನು ಪ್ರಾಣ ಉಳಿಸಿಕೊಂಡು ಬಂದಿದ್ದೇನೆ ಎಂದು ದೇಶದ ಪ್ರಧಾನಿ ಮೋದಿ ಹೇಳಿಕೆ ವಿಷಾದಿಸುತ್ತೇನೆ. ಇಂತಹ ಪರಿಸ್ಥಿತಿ ಯಾವುದೇ ಪಕ್ಷದ ರಾಜ್ಯ ಸರ್ಕಾರದಲ್ಲಿಯೂ ಆಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
'ಪ್ರಧಾನಿಗೆ ರಕ್ಷಣೆಯ ವಿಚಾರದಲ್ಲಿ ಪಂಜಾಬ್ ಸರ್ಕಾರದ ಬೇಜವಾಬ್ದಾರಿ ಆತಂಕಕಾರಿ' - ತುಮಕೂರಿನಲ್ಲಿ ಪ್ರಧಾನಿ ಮೋದಿಗೆ ಆದ ಭದ್ರತಾ ಲೋಪ ಘಟನೆ ಖಂಡಿಸಿದ ಸಚಿವ ಮಾಧುಸ್ವಾಮಿ
ಓರ್ವ ಪ್ರಧಾನಿಗೆ ರಕ್ಷಣೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಇಂತಹ ಬೇಜವಾಬ್ದಾರಿ ನಡೆ ಸರಿಯಲ್ಲ. ಯಾವುದೇ ಪಕ್ಷ ಅಥವಾ ಸರ್ಕಾರವಿರಲಿ ಫೆಡರಲ್ ವ್ಯವಸ್ಥೆಯಲ್ಲಿ ರಕ್ಷಣೆ ವಿಚಾರದಲ್ಲಿ ಈ ರೀತಿಯಾಗಿ ನಡೆದುಕೊಳ್ಳುವುದು ಸಾಕಷ್ಟು ಆತಂಕಕಾರಿ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ
ನಗರದಲ್ಲಿ ಮಾತನಾಡಿದ ಅವರು, ಓರ್ವ ಪ್ರಧಾನಿಗೆ ರಕ್ಷಣೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಇಂತಹ ಬೇಜವಾಬ್ದಾರಿ ನಡೆ ಸರಿಯಲ್ಲ. ಯಾವುದೇ ಪಕ್ಷ ಅಥವಾ ಸರ್ಕಾರವಿರಲಿ ಫೆಡರಲ್ ವ್ಯವಸ್ಥೆಯಲ್ಲಿ ರಕ್ಷಣೆ ವಿಚಾರದಲ್ಲಿ ಈ ರೀತಿಯಾಗಿ ನಡೆದುಕೊಳ್ಳುವುದು ಸಾಕಷ್ಟು ಆತಂಕಕಾರಿ ಎಂದರು.
ಇದೇ ವೇಳೆ, ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಲು ಸಾಧ್ಯವಿಲ್ಲ, ಈ ಕುರಿತು ಉಪನ್ಯಾಸಕರು ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.