ಕರ್ನಾಟಕ

karnataka

ETV Bharat / state

ಹೇಮಾವತಿ ನದಿ ನೀರಿನ ವಿಷಯದಲ್ಲಿ ರಾಜಕೀಯ: ಸಚಿವ ಮಾಧುಸ್ವಾಮಿ - ತುಮಕೂರು ಹೇಮಾವತಿ ನದಿ ನಾಲೆಗಳು

ತುಮಕೂರು ಜಿಲ್ಲೆ ಶಿರಾ ಉಪ ಚುನಾವಣೆ ನಡೆಯಲಿದ್ದು, ಮಾಜಿ ಸಚಿವರು ಮತ ಬೇಟೆಗಾಗಿ ಹೇಮಾವತಿ ನಾಲೆಗಳಿಗೆ ನದಿ ನೀರು ಬಿಡಿಸಿದ್ದೇನೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಸಮಿತಿ ತೀರ್ಮಾನದಂತೆ ನಾಲೆಗಳಿಗೆ ನದಿ ನೀರು ಬಿಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಣೆ ನೀಡಿದರು.

hemavathi rever
ಹೇಮಾವತಿ ನದಿ ನೀರಿನ ನಾಲೆ

By

Published : Aug 15, 2020, 5:01 PM IST

ತುಮಕೂರು: ಅನಾರೋಗ್ಯದಿಂದ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಸತ್ಯನಾರಾಯಣ ನಿಧನರಾಗಿದ್ದು, ಆ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಹೇಮಾವತಿ ನಾಲೆಗಳಿಗೆ ಹರಿಸಲಾದ ನೀರನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾಜಿ ಸಚಿವ ಟಿ.ಬಿ.ಜಯಚಂದ್ರಗೆ ಕುಟುಕಿದ್ದಾರೆ.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ನಾಲೆಗಳಿಗೆ ನೀರು ಹರಿಯುತ್ತಿರುವ ವಿಚಾರ ತೆಗೆದುಕೊಂಡು ಜನರ ಓಲೈಸುವ ಯತ್ನಕ್ಕೆ ಇಳಿಯುತ್ತಿದ್ದಾರೆ. ಈಚೆಗಷ್ಟೇ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ಹೇಮಾವತಿ ನಾಲೆಗಳಿಗೆ ಮುಖ್ಯವಾಗಿ ಮೊದಲ ಹಂತದಲ್ಲಿ ಕುಣಿಗಲ್ ಹಾಗೂ ಶಿರಾ ತಾಲೂಕಿನ ನಾಲೆಗಳಿಗೆ ನೀರು ಹರಿಸಲಾಗಿದೆ. ಇದರಲ್ಲಿ ಯಾರ ಮನವಿ ಅಥವಾ ಬೇಡಿಕೆಗಳಿಲ್ಲ ಎಂದು ವಿವರಿಸಿದರು.

ಈ ಮೂಲಕ ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಶಿರಾ ತಾಲೂಕಿನ ವ್ಯಾಪ್ತಿಯ ಹೇಮಾವತಿ ನಾಲೆಗಳಿಗೆ ನೀರು ಹರಿಸಲಾಗಿದೆ ಎಂಬ ಮಾಜಿ ಸಚಿವ ಜಯಚಂದ್ರ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ನಾಲೆಗಳಿಗೆ ನೀರು ಬಿಡಲು ಪ್ರತ್ಯೇಕವಾದ ಸಮಿತಿ ಇದೆ. ಅಲ್ಲಿ ತೀರ್ಮಾನವಾದ ನಂತರ ನೀರು ಹರಿಸಲು ಸಾಧ್ಯ. ಜಯಚಂದ್ರ ನಾಲೆಗಳ ಪೂಜೆ ಮಾಡಿ, ನಾನೇ ನೀರು ಬಿಡಿಸಿದ್ದೇನೆ ಎಂದು ಹೇಳುವುದು ಸರಿಯಲ್ಲ. ಇದು ಜನರಲ್ಲಿ ಗೊಂದಲ ಸೃಷ್ಟಿಸಿದಂತೆ. ಹೇಮಾವತಿ ನಾಲೆಗಳಿಗೆ ಯಾವುದೇ ಅಥವಾ ಯಾರ ಅರ್ಜಿಯ ಆಧಾರದ ಮೇಲೆ ಇರಲಿ ಮತ್ತು ಪ್ರಭಾವದ ಮೇಲೆ ನೀರನ್ನು ಹರಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಈ ರೀತಿಯ ಹೇಳಿಕೆಗಳಿಂದ ಉಪ ಚುನಾವಣೆಯಲ್ಲಿ ಮತ ಬೇಟೆಗೆ ಮುಂದಾಗಿರುವುದು ಸರಿಯಲ್ಲ ಎಂದರು.

ABOUT THE AUTHOR

...view details