ಕರ್ನಾಟಕ

karnataka

ETV Bharat / state

ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತೇವೆ: ಸಚಿವ ಕೆಎನ್ ರಾಜಣ್ಣ - ಈಟಿವಿ ಭಾರತ್​ ಕನ್ನಡ ನ್ಯೂಸ್

ನಾವು ಕೊಟ್ಟಿರುವ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಯಾವುದೇ ಅನುಮಾನ, ಸಂಶಯ ಬೇಡ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನೂತನ ಸಚಿವ ಕೆ.ಎನ್.ರಾಜಣ್ಣ
ನೂತನ ಸಚಿವ ಕೆ.ಎನ್.ರಾಜಣ್ಣ

By

Published : May 28, 2023, 9:24 PM IST

ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ನಾವು ಸಂರ್ಪೂಣ ಬದ್ದರಾಗಿದ್ದೇವೆ .

ತುಮಕೂರು :ಜನರಿಗೆ ನಾವು ಕೊಟ್ಟಿರುವ ಐದು ಗ್ಯಾರಂಟಿಗಳನ್ನು ನಿಜಕ್ಕೂ ಕೂಡ ಕಾರ್ಯಗತ ಮಾಡಿಯೇ ತೀರುತ್ತೇವೆ. ಇದರ ಮೇಲೆ ಯಾವುದೇ ಅನುಮಾನವನ್ನು ಇಟ್ಟುಕೊಳ್ಳುವುದು ಬೇಡ. ಅದು 50 ಲಕ್ಷ ಕೋಟಿ ಆಗಲಿ ಇಲ್ಲ, 60 ಲಕ್ಷ ಕೋಟಿ ಆಗಲಿ.. ಇದರ ಬಗ್ಗೆ ಈಗಾಗಲೇ ಕ್ಯಾಬಿನೆಟ್​ನಲ್ಲಿ ಪ್ರಸ್ತಾಪವಾಗಿದೆ. ಇದಕ್ಕೆ ನಾವು ಸಂಪೂರ್ಣ ಬದ್ದರಾಗಿದ್ದೇವೆ ಎಂದು ನೂತನ ಸಚಿವಕೆ.ಎನ್.ರಾಜಣ್ಣ ಹೇಳಿದರು.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೆಣ್ಣು ಮಕ್ಕಳಿಗೆ 2000 ಸಾವಿರ ರೂ.ಗಳನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ. ಆ ಹೆಣ್ಣು ಮಕ್ಕಳು ಯಾರೆಂದು ಹುಡಕಬೇಕು. ಏಕೆಂದರೆ ಈ ಹಿಂದೆಯೂ 1200 ಪಿಂಚಣಿ ತೆಗೆದುಕೊಳ್ಳುವ ಹೆಣ್ಣು ಮಕ್ಕಳಿದ್ದಾರೆ. 2000ಗೆ ಅರ್ಹತೆ ಇರುವ ಮನೆ ಯಜಮಾನಿ ಯಾರು ಇದ್ದಾರೆ ಎಂದು ಫಲಾನುಭವಿಗಳನ್ನು ಗುರುತಿಸಬೇಕು. ಮನೆ ಮನೆಗೆ ದುಡ್ಡನ್ನು ಹಂಚವುದಕ್ಕೆ ಇದು ಚುನಾವಣೆ ಅಲ್ಲ ಎಂದರು.

ಘೋಷಣೆ ಮಾಡಿರುವ ಗ್ಯಾರಂಟಿಗಳು ಯಾರು ಅರ್ಹರು ಆವರಿಗೆ ಮಾತ್ರ ಸಿಗುತ್ತದೆ. ಅರ್ಹರಲ್ಲದೆ ಇರುವವರು ಇದನ್ನು ದುರುಪಯೋಗ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂಬ ದೃಷ್ಟಿಯಿಂದ ಆ ಒಂದು ಕಾರ್ಯಕ್ರಮವನ್ನು ಜಾರಿ ಮಾಡುತ್ತೇವೆ. ಖಂಡಿತವಾಗಿಯೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂಬದನ್ನು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

ಜನರಿಗೆ ಗ್ಯಾರಂಟಿಗಳನ್ನು ಜಾರಿ ಮಾಡುವ ಸಂದರ್ಭದಲ್ಲಿ ಯಾವುದಾದರೂ ನಿಮಯಗಳನ್ನು ಹಾಕುತ್ತೀರ ಎಂದು ಕೇಳಿದ ಪ್ರಶ್ನೆಗೆ, ನಿಮಯಗಳು ಇರುತ್ತೋ ಅಥವಾ ಇರುವುದಿಲ್ಲವೋ ಅದೆಲ್ಲಾ ಮುಂದಿನ ತಿಂಗಳು ಜೂನ್​ 1ನೇ ತಾರೀಕು ಕ್ಯಾಬಿನೆಟ್​ಗೆ ಎಲ್ಲ ಸಿದ್ದತೆಗಳೊಂದಿಗೆ ಬರಲು ಅಧಿಕಾರಿಗಳಿಗೆ ಹಿಂದಿನ ಕ್ಯಾಬಿನೆಟ್​ನಲ್ಲಿ ತಿಳಿಸಿಲಾಗಿದೆ. ಅದೆಲ್ಲ ಬಂದ ಮೇಲೆ ಪರಿಶೀಲನೆ ನಡೆಸಿ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ರಾಜ್ಯದ ಜನರಿಗೆ ಕರೆಂಟ್​ ಬಿಲ್​ ಕಟ್ಟಬೇಡಿ, ಬಸ್​ನಲ್ಲಿ ಟಿಕೆಟ್​ ತೆಗೆದುಕೊಳ್ಳಬೇಡಿ ಎಂದು ಹೇಳಿರುವ ಬಗ್ಗೆ ಪ್ರಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರ ಮಾತನ್ನು ನೀವು ನಂಬುತ್ತೀರಾ?. ಅವರ ವಚನ ಭ್ರಷ್ಟ ಎಂದು ನಿಮಗೆಲ್ಲ ಗೊತ್ತಲ್ಲ. ಆದರೆ, ನಾವು ವಚನ ಭ್ರಷ್ಟ ಆಗುವುದಿಲ್ಲ ಎಂದರು. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷಕ್ಕೆ ಬಹುಮತ ಬರದಿದ್ದರೇ ಪಕ್ಷವನ್ನು ವಿರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಮೊದಲು ಅವರು ಪಕ್ಷವನ್ನು ವಿರ್ಜನೆ ಮಾಡಲಿ. ಆ ಮಾತುಗಳನ್ನು ಉಳಿಸಿಕೊಳ್ಳಲಿ. ಆನಂತರ ನೀವು ಗ್ಯಾರಂಟಿ ಜಾರಿ ಮಾಡಿ ಎಂದು ನಮ್ಮನ್ನು ಕೇಳಬೇಕು ಎಂದು ಕಿಡಿ ಕಾರಿದರು. ಇದೇ ವೇಳೆ ಜನರು ಮುಗ್ಧರಿದ್ದಾರೆ, ಅವರನ್ನು ಎತ್ತಿಕಟ್ಟು ಕೆಲಸ ಮಾಡಬಾರದು. ಬಡವರ ಪಾಲಿನ ಸೌಲಭ್ಯಗಳು ಅವರಿಗೆ ಸಿಗಲಿವೆ ಎಂದರು.

ಇದನ್ನೂ ಓದಿ :ಸಾರಿಗೆ ಸಚಿವರಾಗಲು ಒಪ್ಪಿದ ರಾಮಲಿಂಗರೆಡ್ಡಿ; ಡಿ.ಕೆ.ಸೋದರರ ಮನವೊಲಿಕೆ ಪ್ರಯತ್ನ ಸಫಲ

ABOUT THE AUTHOR

...view details