ತುಮಕೂರು:ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ರೇಣುಕಾ ವಿದ್ಯಾಪೀಠದಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ತೆರಳಿ ಸೋಂಕಿತರಿಗೆ ಧೈರ್ಯ ತುಂಬಿದರು.
ಕೇಂದ್ರದ ಕಾಂಪೌಂಡ್ ಬಳಿ ಪ್ರತಿ ನಿತ್ಯ ಆಯೋಜಿಸಲಾಗುವ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕೆಲಕಾಲ ಕುಳಿತು ಸಂಗೀತ ಆಲಿಸಿದರು. ಅಲ್ಲದೆ ಸೋಂಕಿತರು ಯಾವುದೇ ರೀತಿಯಿಂದಲೂ ಭಯ ಪಡಬಾರದು. ಜಿಲ್ಲಾಡಳಿತ ಹಾಗೂ ರೇಣುಕಾ ವಿದ್ಯಾಪೀಠದ ಸಹಯೋಗದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗುವುದು. ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.