ತುಮಕೂರು : ಮತಾಂತರ ನಿಷೇಧ ಮಾಡುತ್ತಿಲ್ಲ. ಅಸೆಂಬ್ಲಿನಲ್ಲೂ ಹೇಳಿದೀವಿ, ಎಲ್ಲೂ ಮತಾಂತರ ನಿಷೇಧ ಅಂತಾ ಕರೆದಿಲ್ಲ. ಯಾರಾದರೂ ಪ್ರಚೋದನೆ, ಒತ್ತಾಯದಿಂದ ಜೊತೆಗೆ ಭರವಸೆಗಳು ನೀಡಿ ಅಮಾಯಕರನ್ನ ಮತಾಂತರ ಮಾಡೋದನ್ನ ತಡೆಯೋದು ಈ ಕಾಯ್ದೆ ಉದ್ದೇಶ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಯಂಪ್ರೇರಿತವಾಗಿ ಮತಾಂತರ ಆಗುತ್ತೇವಿ ಎಂದರೇ ನಾವು ಅದನ್ನ ಅಡ್ಡಿಪಡಸಲ್ಲ. ಮದುವೆ ಮಾಡಿಕೊಳುತ್ತೇವಿ ಅಂತಾ ನಂಬಿಸಿ, ಪ್ರೀತಿ ಮಾಡಿ ಮತಾಂತರ ಮಾಡೋದು ಕೂಡ ಅಪರಾಧ ಎಂದರು.
ಮತಾಂತರ ನಿಷೇಧ ಕಾಯ್ದೆ ಕುರಿತು ಸಚಿವ ಜೆ ಸಿ ಮಾಧುಸ್ವಾಮಿ ಸ್ಪಷ್ಟನೆ ನೀಡಿರುವುದು.. ಮತಾಂತರ ಆದವರು ಎಸ್ಸಿ/ಎಸ್ಟಿ ಆಗಿದ್ದರೆ ಮತಾಂತರ ಬಳಿಕ ಸರ್ಕಾರ ನೀಡುತ್ತಿರುವ ಸವಲತ್ತುಗಳು ಸ್ಟಾಪ್ ಆಗುತ್ತವೆ. ಮತಾಂತರ ಆದವರ ಮಾಹಿತಿ ಸರ್ವಿಸ್ ಹಿಸ್ಟರಿಗೆ ಎಂಟ್ರಿಯಾಗಬೇಕು. ಮಕ್ಕಳ ಬರ್ತ್ ಸರ್ಟಿಫಿಕೇಟ್, ಶಾಲಾ ದಾಖಲಾತಿಗಳಲ್ಲಿ ದಾಖಲಾಗಬೇಕು. ಕಾನೂನು ಬದ್ಧವಾಗಿ ಮಾಡಲಾಗಿದೆ ಎಂದರು.
ಯಾವ ತಪ್ಪಿಗೆ ಏನು ಶಿಕ್ಷೆ, ಎಷ್ಟು ದಂಡ ಅಂತಾ ಅನಿವಾರ್ಯವಾಗಿ ಈ ಕಾನೂನು ತರಬೇಕಾಗಿತ್ತು. ಮತಾಂತರ ನಿಷೇಧ ಆಗಬೇಕು ಅಂತಾ ಸಿದ್ದಗಂಗಾ ಶ್ರೀಗಳು ಲಾ ಕಮಿಷನ್ಗೆ ಅರ್ಜಿ ಕೊಟ್ಟಿದ್ದರು. ಆರ್ಎಸ್ಎಸ್ ಅರ್ಜಿ ನೀಡಿತ್ತು ಜೊತೆಗೆ ಪ್ರಮುಖ ಸ್ವಾಮೀಜಿಗಳ ಅರ್ಜಿ ಕಂಡು ಸಿದ್ದರಾಮಯ್ಯನವರು ಅಂದು ಕರಡುಗೆ ಸಹಿ ಹಾಕಿದ್ದರು ಎಂದರು.
ಎಲ್ಲೂ ನಾವು ಮತಾಂತರ ನಿಷೇಧ ಮಾಡಿಲ್ಲ. ತಪ್ಪು, ಅಕ್ರಮ, ಪ್ರಲೋಬನೆ, ಪ್ರಚೋದನೆ ನೀಡಿ ಅಮಾಯಕರನ್ನ ಮತಾಂತರ ಮಾಡಲು ತಪ್ಪಿಸಲು ಬಿಲ್ ತರಲಾಗಿದೆ. ಪರಿಷತ್‌ನಲ್ಲಿ ಪಾಸ್ ಮಾಡುತ್ತೇವೆ. ಪಾಸ್ ಆಗದೇ ಸ್ಥಿತಿ ಇಲ್ಲ. ಎಮ್ಎಲ್ಸಿಗಳು ಚುನಾವಣೆಗಳಿಗೆ ಹೋದ ಕಾರಣ ಜನವರಿ ಸೆಷನ್‌ನಲ್ಲಿ ಪಾಸ್ ಮಾಡುತ್ತೇವೆ ಎಂದರು.