ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ ಗೃಹ ಬಳಕೆಗೆ ಮೇಘ ಗ್ಯಾಸ್​​​​ ಸಂಪರ್ಕ - ಮೇಘ ಗ್ಯಾಸ್

ಜಿಲ್ಲೆಯಲ್ಲಿ ಗೃಹ ಬಳಕೆಗೆ ಸಹಕಾರಿಯಾಗುವಂತೆ ಎಲ್​ಪಿಜಿ ಗ್ಯಾಸ್​ಗಿಂತ ಕಡಿಮೆ ಹಣದಲ್ಲಿ ಮೇಘ ಗ್ಯಾಸ್ ಉತ್ತಮ ಸೌಲಭ್ಯ ಕಲ್ಪಿಸಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.

ತುಮಕೂರಿನಲ್ಲಿ ಗೃಹ ಬಳಕೆಗೆ ಮೇಘ ಗ್ಯಾಸ್ ಸಂಪರ್ಕ

By

Published : Aug 17, 2019, 8:56 AM IST

ತುಮಕೂರು: ಮನೆ ಮನೆಗಳಿಗೆ ಮೇಘ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಕ್ಕೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಚಾಲನೆ ನೀಡಿದರು.

ತುಮಕೂರಿನಲ್ಲಿ ಗೃಹ ಬಳಕೆಗೆ ಮೇಘ ಗ್ಯಾಸ್ ಸಂಪರ್ಕ

26ನೇ ವಾರ್ಡ್​ಗೆ ಸೇರುವ ಎಸ್.ಎಸ್. ಪುರಂನಲ್ಲಿನ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ವರ್ಷಗಳ ಕಾಲ ಹಂತ ಹಂತವಾಗಿ ಈ ಯೋಜನಾ ಕಾರ್ಯ ನಡೆಯಲಿದ್ದು, ಈಗ ಎಲ್ಲರೂ ಬಳಸುತ್ತಿರುವಂತಹ ಎಲ್​ಪಿಜಿ ಗ್ಯಾಸ್​ಗಿಂತ ಕಡಿಮೆ ಹಣದಲ್ಲಿ ಮೇಘ ಗ್ಯಾಸ್ ಸೌಲಭ್ಯ ದೊರೆಯಲಿದೆ. ಅನೇಕ ಯೋಜನೆಗಳ ಕಾಮಗಾರಿಗಳು ನಗರದಲ್ಲಿ ನಡೆಯುತ್ತಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.

ABOUT THE AUTHOR

...view details