ತುಮಕೂರು :ವೈದ್ಯಕೀಯ ಕಾಲೇಜು ಶಿರಾ ತಾಲೂಕಿಗೆ ಅಗತ್ಯವಿದೆ. ಅದನ್ನು ಮಂಜೂರು ಮಾಡಬೇಕು ಎಂದು ಸಾರ್ವಜನಿಕರು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರಿಗೆ ಬಹಿರಂಗವಾಗಿ ಆಗ್ರಹಿಸಿದ ಘಟನೆ ಶಿರಾದಲ್ಲಿ ನಡೆಯಿತು.
ಶಿರಾದಲ್ಲಿ ನಡೆದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಹಾಗೂ ಸಾರ್ವಜನಿಕರು ಈ ಬೇಡಿಕೆ ಮುಂದಿಟ್ಟರು. ರೈತ ಮುಖಂಡ ಪರಮಶಿವಯ್ಯ ಎಂಬುವರಿಂದ ಬಹಿರಂಗವಾಗಿ ಒತ್ತಾಯಿಸಲಾಯಿತು.