ತುಮಕೂರು/ದಾವಣಗೆರೆ:ಬೇಸಿಗೆ ಕಾಲದಲ್ಲಿ ಹಲವೆಡೆ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆ. ಅದಕ್ಕಾಗಿಯೇ ಪಾಲಿಕೆಗಳು ಒಂದಿಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿರುತ್ತವೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪಾಲಿಕೆಗಳು ಸಜ್ಜು ಬೇಸಿಗೆ ಸಮಯದಲ್ಲಿ ತುಮಕೂರಿನಲ್ಲಿ ನೀರಿನ ಬವಣೆ ಸ್ವಲ್ಪ ಹೆಚ್ಚೇ ಇರುತ್ತೆ. ಆದ್ರೆ, ಈ ಬಾರಿ ಆ ಸಮಸ್ಯೆ ಉದ್ಭವಿಸದು. ಕಳೆದ ವರ್ಷ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಈ ಜಲಾಶಯದಿಂದ ಕಾಲುವೆಗಳ ಮೂಲಕ ತುಮಕೂರು ಜಿಲ್ಲೆಯ ಬಹುತೇಕ ಕೆರೆ-ಕಟ್ಟೆಗಳಿಗೆ ನೀರು ಹರಿಸಲಾಗಿದೆ.
ತುಮಕೂರು ನಗರದಲ್ಲಿ 700 ಬೋರ್ವೆಲ್ಗಳಿವೆ. ಅಂತರ್ಜಲ ಮಟ್ಟ ಕೂಡ ಉತ್ತಮ ಪ್ರಮಾಣದಲ್ಲಿದೆ. ಈಗಾಗಲೇ ಉತ್ತಮ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರೋದ್ರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರಲ್ಲ ಅನ್ನೋ ವಿಶ್ವಾಸವಿದೆ.
ದಾವಣಗೆರೆಯಲ್ಲಿ ನೀರಿನ ಸಮಸ್ಯೆ ತಲೆದೋರಿದ್ರೆ ಪಾಲಿಕೆ ವ್ಯಾಪ್ತಿಯ ಬೋರ್ವೆಲ್ ಹಾಗು ಟ್ಯಾಂಕರ್ ಮೊರೆ ಹೋಗಬೇಕಿದೆ. ನಗರದ ದಕ್ಷಿಣ ಭಾಗದಲ್ಲಿ ನೀರಿನ ಸಮಸ್ಯೆಯಿದ್ದು, ಅಧಿಕಾರಿಗಳು ಸೂಕ್ತ ಕ್ರಮ ವಹಿಸಲೇಬೇಕು ಎಂದು ಸ್ಥಳೀಯರು ಹೇಳುತ್ತಾರೆ.
ಶುದ್ಧ ಕುಡಿಯುವ ನೀರಿನ ಶೇಖರಣೆಗಾಗಿ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಸಾಲದು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಪಾಲಿಕೆಗಳು ಮತ್ತಷ್ಟು ಕ್ರಮ ವಹಿಸಬೇಕಿದೆ.