ತುಮಕೂರು: ಲಾಕ್ಡೌನ್ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ, ಜಿಲ್ಲಾ ಪಂಚಾಯತಿ ವತಿಯಿಂದ ವಿವಿಧ ಕೆಲಸಗಳನ್ನು ನೀಡಲಾಗಿತ್ತು. ಇದರಿಂದ ಮಹಿಳೆಯರಿಗೆ ಆರ್ಥಿಕ ಹೊರೆಯಿಂದ ಪಾರಾಗಲು ಸಹಕಾರಿಯಾಗಿದೆ.
ಜಿಲ್ಲೆಯ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳಿಂದ ಲಾಕ್ಡೌನ್ ಸಂದರ್ಭದಲ್ಲಿ, 2,000 ಹೆಡ್ ಶೀಲ್ಡ್ ಫೇಸ್ ಮಾಸ್ಕ್, 13,000 ಮಾಸ್ಕ್ಗಳನ್ನು ತಯಾರಿಸಲಾಗಿದೆ. ಎನ್ಆರ್ಎಲ್ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಕೆಲಸಗಳನ್ನು ನೀಡಿ, ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲಾಗಿದೆ.
ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವರದಾನವಾಗಿದ್ದ ಮಾಸ್ಕ್ ತಯಾರಿಕೆ ಅಲ್ಲದೆ 2.60 ಲಕ್ಷ ರೂ. ಹಣವನ್ನು ಜಿಲ್ಲಾ ಪಂಚಾಯತಿ ವತಿಯಿಂದ ಸ್ವಸಹಾಯ ಗುಂಪುಗಳಿಗೆ ನೀಡಲಾಗಿದೆ. ಸಂಜೀವಿನಿ ಯೋಜನೆಯಡಿ ರಚಿಸಿರುವ ಈಚನೂರು ಅಮೃತಬಿಂದು ಗ್ರಾಮಪಂಚಾಯತ್ ಒಕ್ಕೂಟದ ಜೇನುಶ್ರೀ ಮಹಿಳಾ ಸ್ವಸಹಾಯ ಗುಂಪುಗಳಿಗೆ, ಹೆಡ್ ಶೀಲ್ಡ್ ಫೇಸ್ ಮಾಸ್ಕ್ ತಯಾರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮ ಪಂಚಾಯತಿ ಒಕ್ಕೂಟಗಳ ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳಿಗೆ, 13,000 ಮಾಸ್ಕ್ಗಳನ್ನು ತಯಾರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರಿಂದಾಗಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಹೊರೆ ತಪ್ಪಿಸಲು ಸಾಕಷ್ಟು ಸಹಕಾರಿಯಾಗಿತ್ತು ಎಂದೇ ಹೇಳಬಹುದಾಗಿದೆ.