ಕರ್ನಾಟಕ

karnataka

ETV Bharat / state

ಲಾಕ್ ಡೌನ್ ಅರಿವು ಮೂಡಿಸಲು ಪೊಲೀಸ್, ಆರೋಗ್ಯ ಸಿಬ್ಬಂದಿಯಿಂದ ಪಥ ಸಂಚಲನ

ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಸುಮಾರು 150 ಕೊರೊನಾ ಶಂಕಿತ ಪ್ರಕರಣಗಳು ದಾಖಲಾಗಿದ್ದು, ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಪೊಲೀಸ್​ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಪಥ ಸಂಚಲನ ನಡೆಸಿದರು. ಇದೇ ವೇಳೆ ನಗರದ ಜೆ. ಸಿ. ಆರ್ ಕಾಲೋನಿಯಲ್ಲಿ ಜನರನ್ನು ಉದ್ದೇಶಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣಮಾತನಾಡಿದರು.

March fast by police and health personnel to raise awareness of lockdown
ಲಾಕ್ ಡೌನ್ ಅರಿವು ಮೂಡಿಸಲು ಪೊಲೀಸ್, ಆರೋಗ್ಯ ಸಿಬ್ಬಂದಿಯಿಂದ ಪಥ ಸಂಚಲನ

By

Published : Apr 16, 2020, 8:59 AM IST

ತುಮಕೂರು:ನಗರದಲ್ಲಿ ಲಾಕ್ ಡೌನ್ ಮಹತ್ವ ಮತ್ತು ಜನರಲ್ಲಿ ಕೊರೊನಾ ವೈರಸ್ ಕುರಿತು ಅರಿವು ಮೂಡಿಸಲು ಇಂದು ಪೊಲೀಸ್, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಪಥ ಸಂಚಲನ ನಡೆಸಿದರು.

ಪಥಸಂಚಲನದಲ್ಲಿ ವಿಶೇಷ ಪೊಲೀಸ್ ತಂಡ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ನಗರದ ಟೌನ್​ ಹಾಲ್ ವೃತ್ತದಿಂದ ಆರಂಭವಾದ ಪಥ ಸಂಚಲನ ಬಿ. ಹೆಚ್ ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಜೆ. ಸಿ. ಆರ್ ಕಾಲೋನಿ, ಗುಬ್ಬಿ ಗೇಟ್, ಬಿ. ಜಿ ಪಾಳ್ಯ ಸರ್ಕಲ್, ಸುಬ್ರಮಣ್ಯ ದೇವಾಲಯದ ರಸ್ತೆ, ಈದ್ಗಾ ಮೊಹಲ್ಲ ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ಸಾಗಿತು.

ಇದೇ ವೇಳೆ ನಗರದ ಜೆ. ಸಿ. ಆರ್ ಕಾಲೋನಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ, ಸರ್ಕಾರದ ಆದೇಶದಂತೆ ಮೇ 3ರ ವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಓಡಾಡಬಾರದು. ಅಗತ್ಯವಿದ್ದರೆ ಮಾತ್ರ ಬೈಕ್​ಗಳಲ್ಲಿ ಇಬ್ಬರ ಬದಲು ಒಬ್ಬರು ಹೋಗಬೇಕು. ದ್ವಿಚಕ್ರ ವಾಹನಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರ 2500 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ವಾರಕ್ಕೊಮ್ಮ ಆಗುವಷ್ಟು ಖರೀದಿಸಿ. ಹತ್ತಿರವಿರುವ ಅಂಗಡಿಗಳಿಗೆ ನಡೆದುಕೊಂಡು ಹೋಗಿ ತೆಗೆದುಕೊಂಡರೆ, ವಾಹನದಲ್ಲಿ ಓಡಾಡುವುದನ್ನು ಕಡಿಮೆ ಮಾಡಬಹುದು. ಈ ಎಲ್ಲಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಗೆ ಕೊರೊನಾ ಬರದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಿಯಮ ಪಾಲನೆ ಮಾಡದಿದ್ದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

ಇನ್ನೂ ಈಗಾಗಲೇ ಸುಮಾರು 150 ಪ್ರಕರಣ ದಾಖಲಾಗಿವೆ. ನಿಯಮ ಉಲ್ಲಂಘನೆ ಮಾಡಿದರೆ 1-2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು. ಇಲ್ಲವಾದರೆ ಎಫ್ಐಆರ್ ದಾಖಲು ಮಾಡಲಾಗುವುದು. ಡ್ರೋಣ್​ ಕ್ಯಾಮೆರಾ ನಗರ ಪರಿಸ್ಥಿತಿಯನ್ನು ಸೆರೆಹಿಡಿಯುತ್ತಿದೆ ಹಾಗೂ ಅಧಿಕಾರಿಗಳು ಗಸ್ತು ತಿರುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಭಯಪಡದೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಸಾಕು ಎಂದರು.

ABOUT THE AUTHOR

...view details