ತುಮಕೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಂದ ಹಾಡಹಗಲೇ ಮಚ್ಚಿನಿಂದ ಭೀಕರವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಜಿಲ್ಲೆಯ ತಿಪಟೂರಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ತಿಪಟೂರು ನಗರದ ರಂಗಾಪುರ ರಸ್ತೆ ಗಾಂಧಿ ನಗರದ 1ನೇ ಕ್ರಾಸ್ ನಲ್ಲಿ ತಮಿಳು ಕಾಲೋನಿಯ ವೆಂಕಟೇಶ್ ಅಲಿಯಾಸ್ ಸೀಮೆಎಣ್ಣೆ ವೆಂಕಟೇಶ್ ಎಂಬಾತ ಚಿಕ್ಕ ಮಂಜ (28) ಎಂಬಾತನ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದ್ದ.
ನೆಲಕ್ಕೆ ಬಿದ್ದ ಚಿಕ್ಕ ಮಂಜನ ಮೇಲೆ ವೆಂಕಟೇಶ್ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ಭೀಕರವಾಗಿ ಹೊಡೆದಿದ್ದನು. ತೀವ್ರವಾಗಿ ಗಾಯಗೊಂಡಿದ್ದ ಮಂಜನನ್ನು ತಿಪಟೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಕೊಂಡ್ಲಿ ಕ್ರಾಸ್ ಬಳಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಚಿಲ್ಕಾರಿ ಹತ್ಯಾಕಾಂಡದ ಮೋಸ್ಟ್ ವಾಂಟೆಡ್ ನಕ್ಸಲ್ ಕೊಲ್ಹಾ ಯಾದವ್ ಬಂಧನ