ಕರ್ನಾಟಕ

karnataka

ETV Bharat / state

ಕಣ್ಣೆದುರು ಕೊಚ್ಚಿ ಹೋಗುತ್ತಿದ್ದ ಬಾಲಕನ ರಕ್ಷಣೆಗಿಳಿದ ವ್ಯಕ್ತಿಯೂ ನೀರುಪಾಲು - ಕೊರಟಗೆರೆ ಪೊಲೀಸ್ ಠಾಣೆ

ಕಣ್ಣೆದುರೇ ನೀರು ಪಾಲಾಗುತ್ತಿದ್ದ ಬಾಲಕನನ್ನು ರಕ್ಷಿಸಲು ತೆರಳಿದ ವ್ಯಕ್ತಿಯೊಬ್ಬರು ನೀರು ಪಾಲಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿಯಲ್ಲಿ ನಡೆಯಿತು.

ಕೃಷ್ಣಪ್ಪ
ಕೃಷ್ಣಪ್ಪ

By

Published : Nov 28, 2022, 4:49 PM IST

ತುಮಕೂರು:ಕಣ್ಣೆದುರೇ ನೀರುಪಾಲಾಗುತ್ತಿದ್ದ ಬಾಲಕನನ್ನು ಹೇಗಾದರೂ ಮಾಡಿ ರಕ್ಷಿಸಲೇಬೇಕು ಎಂದು ಪಣತೊಟ್ಟು ಕೆರೆಗೆ ಹಾರಿದ ವ್ಯಕ್ತಿಯೂ ಪ್ರಾಣ ಕಳೆದುಕೊಂಡ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿಯಲ್ಲಿ ನಡೆಯಿತು.

ಇಲ್ಲಿನ ದೊಡ್ಡಕೆರೆಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗೇಳುತ್ತಿದ್ದ ನಿತಿನ್‌ (11) ಎಂಬಾತನನ್ನು ರಕ್ಷಿಸಲು ಹೋದ ಕೃಷ್ಣಪ್ಪ (45) ಪ್ರಾಣ ಕಳೆದುಕೊಂಡಿದ್ದಾರೆ.

ಭಾನುವಾರ ಸಂಜೆ ನಿತಿನ್ ತನ್ನ ಗೆಳೆಯರ ಜತೆ ಸೇರಿ ತುಂಬಾಡಿ ದೊಡ್ಡ ಕೆರೆಯಲ್ಲಿ ಈಜಾಡಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ನೀರಿನಲ್ಲಿ ಆಳಕ್ಕೆ ಹೋದ ನಿತಿನ್ ಮೇಲೆ ಬರಲಾಗದೇ ಈಜೂ ಬಾರದೆ ಒದ್ದಾಡುತ್ತಿದ್ದ. ಇದನ್ನು ಗಮನಿಸಿದ್ದ ದಡದಲ್ಲಿದ್ದ ಕೃಷ್ಣಪ್ಪ ಹುಡುಗನನ್ನು ರಕ್ಷಿಸಲೆಂದು ನೀರಿಗೆ ಹಾರಿದ್ದಾರೆ. ಆದರೆ, ನಿತಿನ್ ಕೂಡಾ ಬದುಕಲಿಲ್ಲ, ಕಾಪಾಡಲೆಂದು ಹಾರಿದ ಕೃಷ್ಣಪ್ಪ ಅವರೂ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಸಂಬಂಧ ಸ್ಥಳೀಯರು ಕೊರಟಗೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಸಹೋದರಿಯರೂ ನೀರುಪಾಲು!

ABOUT THE AUTHOR

...view details