ತುಮಕೂರು :ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಸಚಿವ ಸಂಪುಟದಲ್ಲಿ ಜೆ ಸಿ ಮಧುಸ್ವಾಮಿ ಸಚಿವರಾಗಿ, ಜಿಲ್ಲೆಯ ಉಸ್ತುವಾರಿಯಾಗಿ ಮುಂದುವರೆದರೆ ಒಳ್ಳೆಯದು ಎಂದು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ ಪ್ರತಿಕ್ರಿಯಿಸಿದ್ದಾರೆ.
ಗುಬ್ಬಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಪರ ಚಿಂತನೆಗಳ ದೃಷ್ಟಿಯಿಂದ ಮಾಧುಸ್ವಾಮಿ ಮುಂದುವರೆಯಬೇಕು ಎಂದು ಹೇಳಿದ್ದಾರೆ. ನಾನು ವೈಯಕ್ತಿಕವಾಗಿ ಮಾಧುಸ್ವಾಮಿಯವರು ಮುಂದುವರೆಯಬೇಕು ಎಂದು ಹೇಳುತ್ತಿಲ್ಲ.