ಕರ್ನಾಟಕ

karnataka

ETV Bharat / state

ಕವಿ ವರವರರಾವ್​ಗೆ ಜಾಮೀನುರಹಿತ ವಾರಂಟ್ ಜಾರಿ ಮಾಡಿದ ಮಧುಗಿರಿ ನ್ಯಾಯಾಲಯ

2005ರಲ್ಲಿ ತುಮಕೂರಿನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರರಾವ್ ಅವರಿಗೆ ಮಧುಗಿರಿ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.

ಕವಿ ವರವರರಾವ್​
ಕವಿ ವರವರರಾವ್​

By

Published : Oct 25, 2021, 11:56 AM IST

ತುಮಕೂರು:ಕವಿ ವರವರ ರಾವ್ ಅವರಿಗೆ ಮಧುಗಿರಿ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ. 2005ರಲ್ಲಿ ತುಮಕೂರಿನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಕವಿ ವರವರ ರಾವ್ ಮತ್ತು ಗದ್ದರ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮಧುಗಿರಿ ನ್ಯಾಯಾಲಯದ ಜಾಮೀನುರಹಿತ ವಾರೆಂಟ್ ವಿರುದ್ಧವಾಗಿ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸುವುದಾಗಿ ವರವರ ರಾವ್​ ಪರ ವಕೀಲ ಎಸ್.ಬಾಲನ್ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2005 ರ ಫೆಬ್ರವರಿ 5 ರಂದು ಪಾವಗಡದ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ನಕ್ಸಲ್ ಹತ್ಯಾಕಾಂಡ ನಡೆದಿತ್ತು. ಈ ಘಟನೆಯಲ್ಲಿ ಓರ್ವ ನಾಗರಿಕ ಸೇರಿ 7 ಮಂದಿ ಪೊಲೀಸರು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ನಕ್ಸಲರಿಗೆ ವರವರರಾವ್​ ಸಹಕರಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.

ಈಗಾಗಲೇ ಭೀಮಾ ಕೊರೆಗಾಂವ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್​​ ಮುಂಬೈ ಬಿಟ್ಟು ಹೊರ ಹೋಗಬಾರದು ಎಂದು ಆದೇಶಿಸಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಅವರು ವೈದ್ಯಕೀಯ ಕಾರಣಗಳನ್ನು ನೀಡಿ ಹೊರ ಹೋಗಿದ್ದಾರೆ.

ಇದನ್ನೂ ಓದಿ: ಮಗಳ ಮದ್ವೆಗಾಗಿ ಕೂಲಿ ಕೆಲಸಕ್ಕೆ ತೆರಳಿದ ಪೋಷಕರು; ಟ್ರ್ಯಾಕ್ಟರ್ ಪಲ್ಟಿಯಾಗಿ ಪುತ್ರಿ ಸಾವು

ABOUT THE AUTHOR

...view details