ತುಮಕೂರು :ಜಿಲ್ಲೆಯಲ್ಲಿ ಒಂದೆಡೆ ಭರ್ಜರಿ ಮಳೆಯಾಗುತ್ತಿದೆ. ಇನ್ನೊಂದೆಡೆ ಹೇಮಾವತಿ ಜಲಾಶಯದಿಂದ (Hemavathi dam)ಹರಿದು ಬರುವ ನೀರಿನ ಪ್ರಮಾಣದಲ್ಲಿಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ, ಜಿಲ್ಲೆಯ ಶಿರಾ ತಾಲೂಕಿನಲ್ಲಿರುವ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮದಲೂರು ಕೆರೆಗೂ(Madaluru lake) ಭರಪೂರ ನೀರು ಹರಿದು ಬರುತ್ತಿದೆ.
ಶಿರಾ ಉಪಚುನಾವಣೆ ವೇಳೆ ಬಿಜೆಪಿ ಸರಕಾರ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಾಗ್ದಾನ ನೀಡಿತ್ತು. ಆದ್ರೆ, ನಂತರದಲ್ಲಿ ಹೇಮಾವತಿ ನೀರು(Hemavathi water)ಹರಿದರೂ ಕೆರೆ ತುಂಬದೆ ಬತ್ತಿ ಹೋಗಿತ್ತು.
ಆದ್ರೆ, ಪ್ರಸ್ತುತ ಹೇಮಾವತಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದೀಗ 2816 ಕ್ಯೂಸೆಕ್ ಇದ್ದು, ತುಮಕೂರು ಜಿಲ್ಲೆಯ ನಾಲೆಗಳಲ್ಲಿಯೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.