ತುಮಕೂರು:ವೈಯಕ್ತಿಕ ಸಮಸ್ಯೆಯಿಂದ ಮನನೊಂದಿದ್ದ ಲಾರಿ ಚಾಲಕನೊಬ್ಬನ ಶವ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಅಂಡರ್ ಪಾಸ್ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತುಮಕೂರು ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ಚಾಲಕ ನೇಣಿಗೆ ಶರಣು - ಕ್ಯಾತಸಂದ್ರ ಪೊಲೀಸ್ ಠಾಣೆ
ಲಾರಿ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ಬಳಿ ನಡೆದಿದೆ.
ತುಮಕೂರು ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ಚಾಲಕ ನೇಣಿಗೆ ಶರಣು..!
ಮಧುಸೂದನ್ (30) ಮೃತ ಲಾರಿ ಚಾಲಕ. ಈತ ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮದವನೆಂದು ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿ ಶಿರಾಗೆ ತೆರಳಿದ್ದ ಮಧುಸೂದನ್, ನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೋಗಬೇಕೆಂದು ಮತ್ತೊಬ್ಬ ಲಾರಿ ಚಾಲಕನಿಗೆ ಲಾರಿ ಕೊಟ್ಟು ಕಳುಹಿಸಿದ್ದನಂತೆ.
ನಡುರಾತ್ರಿ ಹೆದ್ದಾರಿಯ ಅಂಡರ್ ಪಾಸ್ ಬಳಿ ಕಬ್ಬಿಣದ ಪೈಪ್ಗೆ ನೇಣು ಬಿಗಿದಕೊಂಡಿದ್ದಾನೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.