ತುಮಕೂರು: ಲಾಕ್ಡೌನ್ ನಡುವೆಯೂ ತುಮಕೂರು ನಗರದ ಗೂಳೂರು ಕೆರೆ ಹಿಂಭಾಗದಲ್ಲಿ ಯುವಕರು ರಾಜಾರೋಷವಾಗಿ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 25 ಯುವಕರು ಸರ್ಕಾರದ ಆದೇಶ ಲೆಕ್ಕಿಸದೇ ಗುಂಪು-ಗುಂಪಾಗಿ ಕುಳಿತಿದ್ದರು.
ಲಾಕ್ಡೌನ್ ನಡವೆಯೂ ಕ್ರಿಕೆಟ್ ಆಡಿದ ಯುವಕರು: ಬುದ್ಧಿ ಹೇಳಿದ ಪೊಲೀಸರು - ಯುವಕರ ಕ್ರಿಕೆಟ್ ಮೋಜು
ತುಮಕೂರಿನ ಗುಳೂರು ಕೆರೆ ಹಿಂಭಾಗದಲ್ಲಿ ಲಾಕ್ಡೌನ್ ಆದೇಶವನ್ನೂ ಲೆಕ್ಕಿಸದೆ ಯುವಕರು ಕ್ರಿಕೆಟ್ ಆಡಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ ಆದೇಶ ಲೆಕ್ಕಿಸದೇ ಯುವಕರ ಕ್ರಿಕೆಟ್ ಮೋಜು
ವಿಷಯ ತಿಳಿದು ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕೊರೊನಾ ಕುರಿತು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ.