ತುಮಕೂರು:ಒಂದು ಮರದಿಂದ ಮತ್ತೊಂದು ಮರಕ್ಕೆ ಜಿಗಿಯುವ ಸಂದರ್ಭದಲ್ಲಿ ಚಿರತೆಯೊಂದು ಟ್ರಾನ್ಸ್ಫಾರ್ಮರ್ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿ ಕರೇಗೌಡನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು 2 ವರ್ಷದ ಚಿರತೆ ಮರದ ಮೇಲೆ ಕುಳಿತಿತ್ತು. ಮರದಿಂದ ಕೆಳಗೆ ಇಳಿದು ಮುಂದೆ ಹೋಗುವ ಬದಲು ಚಿರತೆ ಮತ್ತೊಂದು ಮರಕ್ಕೆ ಹಾರಿ ಹೋಗಲು ಮುಂದಾಗಿದೆ. ಆಯತಪ್ಪಿ ಕೆಳಗೆ ಬಿದ್ದ ಚಿರತೆ ಸಮೀಪದಲ್ಲೇ ಇದ್ದ ಟ್ರಾನ್ಸ್ಫಾರ್ಮರ್ ಮೇಲೆ ಬಿದ್ದಿದೆ. ಕ್ಷಣಾರ್ಧದಲ್ಲಿ ವಿದ್ಯುತ್ ಸ್ಪರ್ಶದಿಂದ ಚಿರತೆ ಪ್ರಾಣ ಬಿಟ್ಟಿದೆ.