ತುಮಕೂರು:ಜಿಲ್ಲೆಯ ದೇವರಾಯನದುರ್ಗ ಬಳಿಯ ಗಣಪತಿನಾಮದ ಚಿಲುಮೆ ಯುವಕರು ಕೋತಿಗಳಿಗೆಂದು ಇರಿಸಿದ್ದ ನೀರಿನ ತೊಟ್ಟಿಯಲ್ಲಿ ರಾತ್ರಿ ವೇಳೆ ಚಿರತೆಯೊಂದು ನೀರು ಕುಡಿಯುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಸ್ತೆ ಬದಿಯ ತೊಟ್ಟಿಯಲ್ಲಿ ನೀರು ಕುಡಿದ ಚಿರತೆ- ಮೊಬೈಲ್ನಲ್ಲಿ ಸೆರೆಯಾಯ್ತು ದೃಶ್ಯ - ರಸ್ತೆ ಬದಿ ಕಂಡು ಬಂದ ಚಿರತೆ
ತುಮಕೂರಿನಲ್ಲಿ ಕೋತಿಗಳಿಗೆಂದು ತುಂಬಿ ಇಟ್ಟಿದ್ದ ನೀರನ್ನು ಚಿರತೆಯೊಂದು ಕುಡಿಯುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ರಸ್ತೆ ಬದಿ ತೊಟ್ಟಿಯಲ್ಲಿ ನೀರು ಕುಡಿದ ಚಿರತೆ
ರಾತ್ರಿ ವೇಳೆ ದಾರಿಹೋಕರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರು ಚಿರತೆ ಕಂಡು ಆತಂಕಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.