ಕರ್ನಾಟಕ

karnataka

ETV Bharat / state

ಕೊರಟಗೆರೆ: ಇರಕಸಂದ್ರ ಕಾಲೋನಿಯಲ್ಲಿ ಬಾಲಕರ ಮೇಲೆ ಚಿರತೆ ದಾಳಿ - ತುಮಕೂರಲ್ಲಿ ಚಿರತೆ ದಾಳಿ

ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಬಾಲಕರ ಮೇಲೆ ಚಿರತೆ ದಾಳಿ.

ಚಿರತೆ ದಾಳಿ
ಚಿರತೆ ದಾಳಿ

By

Published : Dec 10, 2022, 11:52 AM IST

ತುಮಕೂರು: ಜಿಲ್ಲೆ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಇಂದು ಬೆಳಗ್ಗೆ ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ ಮಾಡಿದೆ. ಧನುಷ್ (13) ಹಾಗೂ ಚೇತನ್ (15) ಕೊಟ್ಟಿಗೆಯಲ್ಲಿದ್ದ ಹಸುವಿನ ಹಾಲು ಕರೆಯಲು ಹೋದಾಗ ಚಿರತೆ ದಾಳಿ ಮಾಡಿದೆ.

ಬಾಲಕರಿಬ್ಬರಿಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆಗಳು ದಾಳಿ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ಬಾಲಕರ ತಂದೆ ಕೆಂಪರಾಜು ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದರು. ಆದ್ರೆ ಕರೆ ಮಾಡಿದಾಗ ಕೊರಟಗೆರೆಯಲ್ಲಿ ಆಂಬ್ಯುಲೆನ್ಸ್ ಇಲ್ಲ, ತುಮಕೂರು ಆಸ್ಪತ್ರೆಗೆ ಕರೆ ಮಾಡುವಂತೆ ಸೂಚಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಬಳಿಕ ಕೆಂಪರಾಜು ಅವರು ಕೂಡಲೇ ಖಾಸಗಿ ಕಾರಿನಲ್ಲೇ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಹೋದಾಗ ಆವರಣದಲ್ಲೇ ಎರಡು ಆಂಬ್ಯುಲೆನ್ಸ್ ಇರುವುದನ್ನು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

(ಓದಿ: ಹಾವೇರಿ: ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷ.. ಭೀತಿಗೊಳಗಾದ ಜನ)

ABOUT THE AUTHOR

...view details