ತುಮಕೂರು: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯ ಗ್ರಾಮದ ಬಳಿ ನಡೆದಿದೆ.
ಲಾರಿ ಡಿಕ್ಕಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು - ತುಮಕುರು ಅಪಘಾತ ಸುದ್ದಿ
ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಏಕಾಏಕಿ ಬಂದ ಲಾರಿ ಆತನ ತಲೆ ಮೇಲೆ ಹರಿದಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.
ಲಾರಿ ಡಿಕ್ಕಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ಕೆರೆಗಳ ಪಾಳ್ಯ ಗ್ರಾಮದ ಶ್ರೀನಿವಾಸ್ (30) ಮೃತ ದುರ್ದೈವಿ. ಹಾಲು ಖರೀದಿಸಲು ಬಂದಿದ್ದ ಶ್ರೀನಿವಾಸ್ ಭಾರಿ ವಾಹನಗಳು ಸಂಚರಿಸುತ್ತಿದ್ದರಿಂದ ರಸ್ತೆ ಬದಿ ನಿಂತಿದ್ದ. ಏಕಾಏಕಿ ಬಂದ ಲಾರಿ ಆತನ ತಲೆ ಮೇಲೆ ಹರಿದಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಮಧುಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated : Dec 21, 2019, 9:58 AM IST