ಕರ್ನಾಟಕ

karnataka

ETV Bharat / state

ಜಮೀನು ವಿವಾದ: ಮಾರಾಮಾರಿಯಲ್ಲಿ ವೃದ್ಧನಿಗೆ ಗಂಭೀರ ಗಾಯ - ತುಮಕೂರು ಜಿಲ್ಲೆ ಮಧುಗಿರಿ ತಾಲೂಕು

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ತಿಪ್ಪಾಪುರದಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ಮಾರಾಮಾರಿ ನಡೆದಿದ್ದು ವೃದ್ಧನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

Serious injury to old man
ಜಮೀನು ವಿವಾದದಲ್ಲಿ ವೃದ್ಧನಿಗೆ ಗಂಭೀರ ಗಾಯ

By

Published : Jun 15, 2020, 12:40 PM IST

ತುಮಕೂರು: ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ಮಾರಾಮಾರಿ ನಡೆದಿದ್ದು, ವೃದ್ಧನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.

ಹನುಮಂತರಾಯಪ್ಪ ಎಂಬುವರ ಮೇಲೆ ಪಕ್ಕದ ಜಮೀನಿನ ನರಸಿಂಹಮೂರ್ತಿ ಎಂಬುವವರು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ ತಮ್ಮ ಜಮೀನು ಒತ್ತುವರಿ ಮಾಡಿಕೊಂಡು ಹನುಮಂತರಾಯಪ್ಪ ಎಂಬುವವರು ಕೊಳವೆ ಬಾವಿ ತೋಡಿಸಿದ್ದಾರೆ ಎಂದು ನರಸಿಂಹಮೂರ್ತಿ ದೂರಿದ್ದಾರೆ.

ಜಮೀನು ವಿವಾದದಲ್ಲಿ ವೃದ್ಧನಿಗೆ ಗಂಭೀರ ಗಾಯ

ಇನ್ನೂ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇದರಿಂದ ಹನುಮಂತರಾಯಪ್ಪ ಎಂಬುವವರ ಕೈಗೆ ಗಾಯವಾಗಿದ್ದು, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮಿಡಿಗೇಶಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details