ತುಮಕೂರು: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದ್ದು, ನಿರಂತರ ಮಳೆಯಿಂದಾಗಿ ಅಡಕೆ ತೋಟಗಳಿಗೆ ನೀರು ನುಗ್ಗಿ 300 ಎಕರೆ ಅಡಕೆ ತೋಟ ಜಲಾವೃತಗೊಂಡಿದೆ. ತಾಲೂಕಿನ ನರಸಾಪುರ, ಹೆಬ್ಬಾಕ, ಕಳಸೇಗೌಡನ ಪಾಳ್ಯದಲ್ಲಿ ಅಡಕೆ ತೋಟಕ್ಕೆ ಬುಗುಡನಹಳ್ಳಿ ಕೆರೆ ನೀರು ನುಗ್ಗಿದ್ದು ರೈತರು ಕಂಗಾಲಾಗಿದ್ದಾರೆ.
ಕಳೆದ 10 ದಿನಗಳಿಂದ ಅಡಕೆ ತೋಟಕ್ಕೆ ನೀರು ನುಗ್ಗಿದ್ದು, ತೋಟಗಳಿಗೆ ಹೋಗಲು ಸಾಧ್ಯವಾಗದೇ ರೈತರ ಪರದಾಡುತ್ತಿದ್ದಾರೆ. ಅಡಕೆ ಫಸಲು ಕಳೆದುಕೊಳ್ಳುವ ಭೀತಿ ಇಲ್ಲಿನ ಸುಮಾರು 50ಕ್ಕೂ ಹೆಚ್ಚು ರೈತರಿಗೆ ಉಂಟಾಗಿದೆ.
ತುಮಕೂರು: ತೋಟಕ್ಕೆ ನುಗ್ಗಿದ ಕೆರೆ ನೀರು, ನೂರಾರು ಎಕರೆ ಅಡಕೆ ಬೆಳೆ ನಾಶ ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸಲಾಗಿದೆ. ಜೊತೆಗೆ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದು, ತೋಟಕ್ಕೆ ಕೆರೆಯ ನೀರು ನುಗ್ಗಿದೆ. ಇದರಿಂದಾಗಿ ಅಡಕೆ ಫಸಲು ನೆಲಕಚ್ಚಿದೆ, ಈ ಸೂಕ್ತ ಬಗ್ಗೆ ಕ್ರಮ ಕೈಗೊಳ್ಳುವಂತೆ ರೈತ ರಮೇಶ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ