ತುಮಕೂರು:ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಗದ್ದಲಕ್ಕೆ ಕಾರಣವಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಕನಕವೃತ್ತ ವಿವಾದವು ಸುಖಾಂತ್ಯ ಕಂಡಿದೆ. ಸಚಿವ ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಹಾಗೂ ಹೋರಾಟಗಳ ನಂತರ ವಿವಾದಕ್ಕೆ ತೆರೆ ಎಳೆಯಲಾಗಿದೆ.
ಹುಳಿಯಾರಿನ ಕನಕವೃತ್ತ ವಿವಾದಕ್ಕೆ ತೆರೆ - ಸಚಿವ ಮಾಧುಸ್ವಾಮಿ ಹೇಳಿಕೆ
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಗದ್ದಲ ಎಬ್ಬಿಸಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಕನಕವೃತ್ತ ವಿವಾದ ಸುಖಾಂತ್ಯ ಕಂಡಿದೆ
ಹುಳಿಯಾರಿನ ಕನಕವೃತ್ತ ವಿವಾದಕ್ಕೆ ತೆರೆ
ಸಚಿವರು ಮಾಧುಸ್ವಾಮಿ ಕಾಗಿನೆಲೆ ಗುರುಪೀಠದ ಈಶ್ವರಾನಂದ ಶ್ರೀಗಳಿಗೆ ಕ್ಷಮೆ ಕೇಳಬೇಕು. ಹಾಗೂ ವೃತ್ತಕ್ಕೆ ಖಾಯಂ ಆಗಿ ಕನಕವೃತ್ತ ಎಂದು ನಾಮಕರಣ ಮಾಡಬೇಕೆಂದು ಹುಳಿಯಾರು ಬಂದ್ಗೆ ಕರೆ ನೀಡಲಾಗಿತ್ತು.
ಇದೀಗ ಅಂತಿಮವಾಗಿ ಹುಳಿಯಾರಿನ ವೃತ್ತಕ್ಕೆ ತಾಲೂಕು ಆಡಳಿತದ ಸಮ್ಮತಿಯ ಮೇರೆಗೆ ಕನಕ ವೃತ್ತ ಎಂದು ನಾಮಫಲಕವನ್ನು ಹಾಕಲಾಗಿದೆ.