ಕರ್ನಾಟಕ

karnataka

ETV Bharat / state

ಕುಣಿಗಲ್ ಬಂದ್: ಬಸ್​ ಸಂಚಾರಕ್ಕೆ ತಡೆಯೊಡ್ಡಿದ ಹೋರಾಟಗಾರರು, ಖಾಸಗಿ ಬಸ್​ ಮಾಲೀಕರ ಸಾಥ್​ - ತುಮಕೂರಿನ ಕುಣಿಗಲ್​ನಲ್ಲಿ ಬಂದ್ ಸುದ್ದಿ

ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದಿಂದ ಅವೈಜ್ಞಾನಿಕ ಕಾಮಗಾರಿ ಮೂಲಕ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗುವಂತಹ ಯೋಜನೆ ವಿರೋಧಿಸಿ  ಕರೆ ನೀಡಲಾಗಿರುವ ಕುಣಿಗಲ್ ಬಂದ್ ಹಿನ್ನೆಲೆಯಲ್ಲಿ ರಸ್ತೆಗಿಳಿದ ಕೆಲ ಹೋರಾಟಗಾರರು ಖಾಸಗಿ ಬಸ್ ಹಾಗೂ ಕೆಎಸ್ಆರ್​ಟಿಸಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಕುಣಿಗಲ್ ಬಂದ್ ಹಿನ್ನೆಲೆ: ಬಸ್​ ಸಂಚಾರಕ್ಕೆ ತಡೆಯೊಡ್ಡಿದ ಹೋರಾಟಗಾರರು

By

Published : Oct 30, 2019, 12:36 PM IST

ತುಮಕೂರು: ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದಿಂದ ಅವೈಜ್ಞಾನಿಕ ಕಾಮಗಾರಿ ಮೂಲಕ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗುವಂತಹ ಯೋಜನೆ ವಿರೋಧಿಸಿ ಕರೆ ನೀಡಲಾಗಿರುವ ಕುಣಿಗಲ್ ಬಂದ್ ಹಿನ್ನೆಲೆಯಲ್ಲಿ ರಸ್ತೆಗಿಳಿದ ಕೆಲ ಹೋರಾಟಗಾರರು ಖಾಸಗಿ ಬಸ್ ಹಾಗೂ ಕೆಎಸ್ಆರ್​ಟಿಸಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಕುಣಿಗಲ್ ಬಂದ್ ಹಿನ್ನೆಲೆ: ಬಸ್​ ಸಂಚಾರಕ್ಕೆ ತಡೆಯೊಡ್ಡಿದ ಹೋರಾಟಗಾರರು

ಇದಕ್ಕೆ ಸ್ಪಂದಿಸಿದ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು ಬಸ್​ಗಳ ಸಂಚಾರ ಸ್ಥಗಿತಗೊಳಿಸಿದ್ದಾರೆ. ಕೆಎಸ್ಆರ್​ಟಿಸಿ ಬಸ್​ಗಳ ಸಂಚಾರವನ್ನು ಕೂಡ ಕುಣಿಗಲ್ ಪಟ್ಟಣದಲ್ಲಿ ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಬೈಪಾಸ್ ಮೂಲಕ ಬಸ್​ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಹೀಗಾಗಿ ಬೆಳಗ್ಗೆಯಿಂದಲೂ ಕುಣಿಗಲ್ ಪಟ್ಟಣದಲ್ಲಿ ವಾಹನಗಳ ಸಂಚಾರ ವಿರಳವಾಗಿದೆ.

ABOUT THE AUTHOR

...view details