ಕರ್ನಾಟಕ

karnataka

ETV Bharat / state

ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು...ಇಂದು ಕುಣಿಗಲ್ ಬಂದ್ - ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ  ನೀರು ಸುದ್ದಿ

ಮಾರ್ಕೋನಹಳ್ಳಿ ಜಲಾಶಯದಿಂದ ನೀರು ಹರಿಸುವ ಕಾಮಗಾರಿಯನ್ನು ಖಂಡಿಸಿ ಇಂದು ಕುಣಿಗಲ್​​ ತಾಲೂಕು ಬಂದ್​ಗೆ ಕರೆನೀಡಲಾಗಿದೆ.

ಕುಣಿಗಲ್ ಬಂದ್

By

Published : Oct 30, 2019, 9:04 AM IST

ತುಮಕೂರು: ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಕುಣಿಗಲ್ ಬಂದ್​​ಗೆ ಕರೆನೀಡಲಾಗಿದೆ.

ಈ ಹಿನ್ನೆಲೆ ಕುಣಿಗಲ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಕೂಡ ನಡೆಯಲಿದ್ದು ಪಕ್ಷಾತೀತವಾಗಿ ಎಲ್ಲಾ ಮುಖಂಡರು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಭಗತ್ ಸಿಂಗ್ ಸೇನೆ ಸೇರಿದಂತೆ ಎಲ್ಲಾ ಪ್ರಗತಿಪರ ಸಂಘಟನೆಗಳು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಕುಣಿಗಲ್ ಬಂದ್

ಅವೈಜ್ಞಾನಿಕ ಕಾಮಗಾರಿ ಮೂಲಕ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಇದ್ರಿಂದ ಮುಂದಿನ ದಿನಗಳಲ್ಲಿ ಕುಣಿಗಲ್ ತಾಲೂಕಿಗೆ ನೀರಿನ ಅಭಾವ ಎದುರಾಗಲಿದೆ. ಅಲ್ಲದೆ ಮಾರ್ಕೋನಹಳ್ಳಿ ಜಲಾಶಯಕ್ಕೆ ಈ ಕಾಮಗಾರಿಯಿಂದ ಹಾನಿ ಉಂಟಾಗಲಿದೆ ಹೀಗಾಗಿ ಇದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ABOUT THE AUTHOR

...view details