ತುಮಕೂರು:ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುತ್ತಿರುವ ಮಧುಗಿರಿ-ಪಾವಗಡ ಮಾರ್ಗದ ಪ್ರಯಾಣಿಕರಿಗೆ ಪ್ರಯಾಣದ ದರವನ್ನು ಇಳಿಸಲಾಗಿದೆ.
ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಕೆಎಸ್ಆರ್ಟಿಸಿ ತುಮಕೂರು ವಿಭಾಗ - KSR TC reduced travel rates from tumkur to madhugiri
ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ ತುಮಕೂರು-ಮಧುಗಿರಿ ಹಾಗೂ ತುಮಕೂರು-ಪಾವಗಡ ಮಾರ್ಗದ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ.
![ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಕೆಎಸ್ಆರ್ಟಿಸಿ ತುಮಕೂರು ವಿಭಾಗ KSR TC reduced travel rates](https://etvbharatimages.akamaized.net/etvbharat/prod-images/768-512-9766390-thumbnail-3x2-giri.jpg)
ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ ತುಮಕೂರು-ಮಧುಗಿರಿ ಹಾಗೂ ತುಮಕೂರು-ಪಾವಗಡ ಮಾರ್ಗದ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ. ಈ ಪರಿಷ್ಕೃತ ದರ ಈಗಾಗಲೇ ಜಾರಿಗೆ ಬಂದಿದ್ದು, ಪರಿಷ್ಕರಣೆಯಾಗಿರುವ ದರದನ್ವಯ ತುಮಕೂರು-ಮಧುಗಿರಿ ಮಾರ್ಗದಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 42 ರೂ.ಗಳ ಪ್ರಯಾಣ ದರವನ್ನು 35 ರೂ.ಗಳಿಗೆ ಇಳಿಸಲಾಗಿದೆ.
ಅದೇ ರೀತಿ ತುಮಕೂರು-ಪಾವಗಡ ಮಾರ್ಗದಲ್ಲಿ ತುಮಕೂರಿನಿಂದ ಮಧುಗಿರಿಗೆ ನಿಗಧಿತ ನಿಲುಗಡೆ(ವೇಗದೂತ)ಯಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 47 ರೂ.ಗಳ ಪ್ರಯಾಣ ದರವನ್ನು 40 ರೂ.ಗಳಿಗೆ ಇಳಿಸಲಾಗಿದೆ. ಈ ಮಾರ್ಗದಲ್ಲಿ ಎರಡು ಟೋಲ್ಗಳಿದ್ದು ನಿಗಮದಿಂದ ಅಲ್ಲಿಗೆ ಸಂದಾಯ ಮಾಡಲಾಗುತ್ತಿದ್ದ ಹಣವನ್ನು ಪ್ರಯಾಣಿಕರ ಮೇಲೆ ಹೇರಲಾಗಿತ್ತು. ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮದ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಫಕೃದ್ದೀನ್ ತಿಳಿಸಿದ್ದಾರೆ.